ಅತ್ಯಾಚಾರ ಪ್ರಕರಣ ಹಿನ್ನೆಲೆ: ಅನುಮತಿ ಪಡೆಯುವವರೆಗೂ ಎಲ್ಲಾ ರೆಸಾರ್ಟ್​ ಗಳು ಬಂದ್

- Advertisement -

ಗಂಗಾವತಿ: ತಾಲೂಕಿನ ಸಣಾಪುರದಲ್ಲಿ ನಡೆದ ವಿದೇಶಿ ಮಹಿಳೆ ಸೇರಿದಂತೆ ಸ್ಥಳೀಯ ಹೋಂ ಸ್ಟೇ ಮಾಲಕಿ ಮೇಲಿನ ಅತ್ಯಾಚಾರ, ಹೊರ ರಾಜ್ಯದ ಪ್ರವಾಸಿಗನ ಕೊಲೆ ಪ್ರಕರಣ ಇಡೀ ದೇಶಾದ್ಯಂತ ಚರ್ಚೆಯಾದ ಬಳಿಕ ಇದೀಗ ಎಚ್ಚೆತ್ತ ಜಿಲ್ಲಾಡಳಿತ, ಕಠಿಣ ಕ್ರಮಕ್ಕೆ ಮುಂದಾಗಿದೆ.

- Advertisement -

ತಾಲೂಕಿನ ಆನೆಗೊಂದಿ-ಸಣಾಪುರ ಸುತ್ತಲಿನ ಅನಧಿಕೃತ ರೆಸಾರ್ಟ್​, ಹೋಂ ಸ್ಟೇಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವ ಉದ್ದೇಶಕ್ಕೆ ಸೋಮವಾರ ಇಲ್ಲಿನ ಮಿನಿ ವಿಧಾನಸೌಧದಲ್ಲಿ ತಹಶೀಲ್ದಾರ್ ಯು ನಾಗರಾಜ್ ನೇತೃತ್ವದಲ್ಲಿ ಅಧಿಕಾರಿಗಳ ಮಟ್ಟದ ಸಭೆ ನಡೆಯಿತು.

ಸ್ಥಗಿತಕ್ಕೆ ನಿರ್ಧಾರ : ಅಧಿಕಾರಿಗಳ ಸಭೆಯ ಬಳಿಕ ಮಾತನಾಡಿದ ತಹಶೀಲ್ದಾರ್ ಯು. ನಾಗರಾಜ್, ಸಾಣಾಪುರ – ಆನೆಗೊಂದಿ ಭಾಗದಲ್ಲಿರುವ ಅನಧಿಕೃತ ರೆಸಾರ್ಟ್​, ಹೋಟೆಲ್, ಹೋಂ ಸ್ಟೇಗಳನ್ನು ತಾತ್ಕಾಲಿಕವಾಗಿ ಸ್ಥಗಿತಕ್ಕೆ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.

- Advertisement -

ಆಯಾ ಗ್ರಾಮ ಪಂಚಾಯಿತಿ, ಪ್ರಾಧಿಕಾರದ ವ್ಯಾಪ್ತಿಯಲ್ಲಿನ ಸಕ್ಷಮ ಪ್ರಾಧಿಕಾರದಲ್ಲಿ ನೋಂದಣಿಯಾಗಿ, ಅಧಿಕೃತ ಅನುಮತಿ ಪಡೆಯುವವರೆಗೆ ಯಾವುದೇ ರೀತಿಯ ಚಟುವಟಿಕೆ ನಡೆಸಲು ಅವಕಾಶ ನೀಡದಂತೆ ಈಗಾಗಲೇ ಪ್ರವಾಸೋದ್ಯಮ ಇಲಾಖೆ ಸೂಚನೆ ನೀಡಿರುವ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದರು.

- Advertisement -


Must Read

Related Articles