Home ಟಾಪ್ ಸುದ್ದಿಗಳು ಕಪಾಳಮೋಕ್ಷ ಮಾಡಿಲ್ಲ: ಸಿಐಎಸ್ ಎಫ್ ಸಿಬ್ಬಂದಿ ಬೆಂಬಲಕ್ಕೆ ನಿಂತ ರಾಕೇಶ್ ಟಿಕಾಯತ್

ಕಪಾಳಮೋಕ್ಷ ಮಾಡಿಲ್ಲ: ಸಿಐಎಸ್ ಎಫ್ ಸಿಬ್ಬಂದಿ ಬೆಂಬಲಕ್ಕೆ ನಿಂತ ರಾಕೇಶ್ ಟಿಕಾಯತ್

ಚಂಡೀಗಢ: ಹೊಸದಾಗಿ ಚುನಾಯಿತ ಸಂಸದೆ ಹಾಗೂ ನಟಿ ಕಂಗನಾ ರಣಾವತ್ ಗೆ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಕಪಾಳಮೋಕ್ಷ ಮಾಡಿದ ಪ್ರಕರಣದಲ್ಲಿ ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್ ಸಿಐಎಸ್ ಎಫ್ ಸಿಬ್ಬಂದಿ ಬೆಂಬಲಕ್ಕೆ ನಿಂತಿದ್ದಾರೆ.

ಫೇಸ್ ಬುಕ್ ನಲ್ಲಿ ವಿಡಿಯೊ ಹೇಳಿಕೆಯ ಮೂಲಕ ಟಿಕಾಯತ್ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ರಣಾವತ್ ಮತ್ತು ಸಿಐಎಸ್ಎಫ್ ಸಿಬ್ಬಂದಿ ನಡುವೆ ದೇಹ ಮುಟ್ಟಿ ಜಗಳ ನಡೆದಿಲ್ಲ ಎಂದು ಟಿಕಾಯತ್ ಹೇಳಿದ್ದಾರೆ. “ಅಲ್ಲಿ ಕಪಾಳಮೋಕ್ಷ ಮಾಡಿಲ್ಲ. ಅಲ್ಲಿ ಜಗಳವಾಗಿರಬಹುದು, ಅದರಿಂದ ಆಕೆಗೆ ನೋವಾಗಿದ್ದಿರಬಹುದು ಎಂದು ಹೇಳಿದ್ದಾರೆ.

“ಜೈ ಜವಾನ್, ಜೈ ಕಿಸಾನ್” ಎಂಬ ಘೋಷಣೆಯನ್ನು ಉಲ್ಲೇಖಿಸಿದ ಟಿಕಾಯತ್, ರೈತ ಕುಟುಂಬದಿಂದ ಬಂದಿರುವ ಸಿಬ್ಬಂದಿ, ರೈತರ ಮೇಲೆ ನಡೆದಿರುವ ಹಿಂದಿನ ಘಟನೆಗಳಿಂದ ನೊಂದಿರಬಹುದು ಎಂದಿದ್ದಾರೆ. ಸಾರ್ವಜನಿಕ ವ್ಯಕ್ತಿಗಳಿಂದ ಗೌರವಾನ್ವಿತ ಭಾಷೆ ಮತ್ತು ನಡವಳಿಕೆಯ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಿದ ಟಿಕಾಯತ್, “ಯಾವುದೇ ಸಂಸದರು, ಯಾವುದೇ ವ್ಯಕ್ತಿ, ಯಾವುದೇ ಜಾತಿ, ಯಾವುದೇ ವೃತ್ತಿ, ಯಾವುದೇ ಧರ್ಮದ ವಿರುದ್ಧ ಅಥವಾ ಯಾವುದೇ ರೈತರು ಅಥವಾ ಬುಡಕಟ್ಟು ಜನಾಂಗದ ವಿರುದ್ಧ ತಪ್ಪು ಪದಗಳನ್ನು ಬಳಸಬಾರದು. ಇವೆಲ್ಲನ್ನೂ ನಿಯಂತ್ರಿಸಬೇಕು ಎಂದಿದ್ದಾರೆ.

Join Whatsapp
Exit mobile version