Home ಟಾಪ್ ಸುದ್ದಿಗಳು ಭಾರತದಲ್ಲಿ 1 ವರ್ಷದೊಳಗೆ ಮಧ್ಯಂತರ ಚುನಾವಣೆ: ಭೂಪೇಶ್ ಬಘೇಲ್ ಭವಿಷ್ಯ

ಭಾರತದಲ್ಲಿ 1 ವರ್ಷದೊಳಗೆ ಮಧ್ಯಂತರ ಚುನಾವಣೆ: ಭೂಪೇಶ್ ಬಘೇಲ್ ಭವಿಷ್ಯ

ನವದೆಹಲಿ: ಕೇಂದ್ರದಲ್ಲಿ ಮತ್ತೊಮ್ಮೆ ಎನ್ ಡಿಎ ಸರ್ಕಾರ ರಚಿಸುವುದು ಖಚಿತವಾಗಿದ್ದು, ನರೇಂದ್ರ ಮೋದಿ ಇದೇ ಭಾನುವಾರ 3ನೇ ಅವಧಿಗೆ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.


ಇದರ ನಡುವೆ ಕಾಂಗ್ರೆಸ್ ನಾಯಕ ಹಾಗೂ ಛತ್ತೀಸ್ ಗಢದ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದು, ಇನ್ನು 1 ವರ್ಷದೊಳಗೆ ದೇಶವು ಮಧ್ಯಂತರ ಸಾರ್ವತ್ರಿಕ ಚುನಾವಣೆಗೆ ಸಾಕ್ಷಿಯಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.


“ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸಿದ್ಧರಾಗಿರಿ. 6 ತಿಂಗಳಿಂದ 1 ವರ್ಷದ ನಡುವೆ ಮಧ್ಯಂತರ ಚುನಾವಣೆ ನಡೆಯಲಿದೆ” ಎಂದು ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಭೂಪೇಶ್ ಬಘೇಲ್ ಹೇಳಿದ್ದಾರೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಅವರ ರಾಜಸ್ಥಾನ ಕೌಂಟರ್ ಭಜನ್ ಲಾಲ್ ಶರ್ಮಾ ಮತ್ತು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ವಿರುದ್ಧವೂ ಭೂಪೇಶ್ ಬಘೇಲ್ ವಾಗ್ದಾಳಿ ನಡೆಸಿದರು. ಯೋಗಿ ಆದಿತ್ಯನಾಥ್ ಅವರ ಕುರ್ಚಿ ಅಲುಗಾಡುತ್ತಿದೆ. ಭಜನ್ ಲಾಲ್ ಶರ್ಮಾ ಅಲುಗಾಡುತ್ತಿದ್ದಾರೆ ಮತ್ತು ದೇವೇಂದ್ರ ಫಡ್ನವಿಸ್ ಕೂಡ ರಾಜೀನಾಮೆ ನೀಡುತ್ತಿದ್ದಾರೆ” ಎಂದು ಬಘೇಲ್ ಹೇಳಿದರು.

Join Whatsapp
Exit mobile version