Home Uncategorized ರೈತ ನಾಯಕ ಟಿಕಾಯತ್ ಮೇಲೆ ದಾಳಿಯ ಹಿಂದೆ ಪ್ರಚಾರದ ಉದ್ದೇಶವಿತ್ತು; ಬಂಧಿತ ಎಬಿವಿಪಿ ನಾಯಕನ ಹೇಳಿಕೆ

ರೈತ ನಾಯಕ ಟಿಕಾಯತ್ ಮೇಲೆ ದಾಳಿಯ ಹಿಂದೆ ಪ್ರಚಾರದ ಉದ್ದೇಶವಿತ್ತು; ಬಂಧಿತ ಎಬಿವಿಪಿ ನಾಯಕನ ಹೇಳಿಕೆ

ರಾಜಸ್ಥಾನ: ಇಲ್ಲಿನ ಅಲ್ವಾರ್‌ನಲ್ಲಿ ರೈತ ನಾಯಕ, ಸಂಯುಕ್ತ ಕಿಸಾನ್ ಮೋರ್ಚಾದ ರಾಷ್ಟ್ರೀಯ ನಾಯಕ, ದೆಹಲಿ ರೈತ ಪ್ರತಿಭಟನೆಯ ಮುಂಚೂಣಿ ನಾಯಕರಾದ  ರಾಕೇಶ್ ಟಿಕಾಯತ್ ಅವರ ಮೇಲೆ ಶುಕ್ರವಾರ (ಏಪ್ರಿಲ್ 02) ನಡೆದ ದಾಳಿ ಪ್ರಕರಣದ ಹಿಂದೆ ಪ್ರಚಾರದ ಉದ್ದೇಶವಿತ್ತು ಎಂದು ಬಂಧಿತ ಎಬಿವಿಪಿ (ಅಖಿಲ ಭಾರತ ವಿದ್ಯಾರ್ಥಿ ಪರಿಷತ್) ನಾಯಕ ಕುಲದೀಪ್ ಯಾದವ್ ವಿಚಾರಣೆ ಸಂದರ್ಭ ಹೇಳಿದ್ದು, ಘಟನೆಯ ಹಿಂದಿನ ವ್ಯವಸ್ಥಿತ ಷಡ್ಯಂತ್ರ ಬಟಾಬಯಲಾಗಿದೆ.

ಕುಲದೀಪ್ ಯಾದವ್ ಸ್ವತಂತ್ರ ಅಭ್ಯರ್ಥಿಯಾಗಿ 2019 ರಲ್ಲಿ ಅಲ್ವಾರ್ ಮೂಲದ ಮತ್ಸ್ಯ ವಿಶ್ವವಿದ್ಯಾಲಯದ ವಿದ್ಯಾರ್ಥಿ ನಾಯಕರಾಗಿದ್ದರು. ಬಳಿಕ ಎಬಿವಿಪಿಗೆ ಸೇರಿದ್ದಾರೆ. ಆದರೆ, ಆತನ ಬಿಎ ಪದವಿ ನಕಲಿ ಎಂಬುದು ತಿಳಿದ ಬಳಿಕ, ಆಯ್ಕೆಯಾದ ಕೆಲವೇ ದಿನಗಳಲ್ಲಿ ಆತ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಆತ ಆಯೋಜಿಸುತ್ತಿದ್ದ ಹಲವು ಕಾರ್ಯಕ್ರಮಗಳಲ್ಲಿ ಬಿಜೆಪಿಯ ಹಿರಿಯ ಮುಖಂಡರು ಹಾಜರಾಗುತ್ತಿದ್ದರು ಎನ್ನಲಾಗಿದೆ. ಬಂಧಿತ ವಿದ್ಯಾರ್ಥಿ ನಾಯಕನೊಂದಿಗಿನ ಯಾವುದೇ ಸಂಬಂಧವಿಲ್ಲ ಎಂದು ಬಿಜೆಪಿ ನಿರಾಕರಿಸಿದ್ದರೂ, ಕುಲದೀಪ್ ಯಾದವ್ ಜೊತೆಗೆ ಇರುವ ಹಿರಿಯ ಬಿಜೆಪಿ ನಾಯಕರ ಚಿತ್ರಗಳು ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.

Join Whatsapp
Exit mobile version