Home ಟಾಪ್ ಸುದ್ದಿಗಳು ಜಿಎಂ ಸಾಸಿವೆ ಪ್ರಯೋಗವನ್ನು ಬಹಿಷ್ಕರಿಸುವುದಾಗಿ ಘೋಷಿಸಿದ ರಾಕೇಶ್ ಟಿಕಾಯತ್

ಜಿಎಂ ಸಾಸಿವೆ ಪ್ರಯೋಗವನ್ನು ಬಹಿಷ್ಕರಿಸುವುದಾಗಿ ಘೋಷಿಸಿದ ರಾಕೇಶ್ ಟಿಕಾಯತ್

ಪ್ರಯಾಗ್ರಾಜ್: ಕೇಂದ್ರ ಸರ್ಕಾರ ಪ್ರಸ್ತಾಪಿಸಿರುವ ಅನುವಂಶೀಯವಾಗಿ ಮಾರ್ಪಡಿಸಿದ (ಜಿಎಂ) ಸಾಸಿವೆಯ ಪ್ರಯೋಗಗಳನ್ನು  ಬಹಿಷ್ಕರಿಸುವುದಾಗಿ ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್ ಹೇಳಿದ್ದಾರೆ.

 ಝಲ್ವಾದ ಘುಂಗ್ರೂ ಛೇದಕದ ಬಳಿ ರೈತರ ಮಹಾಪಂಚಾಯತ್ ಉದ್ದೇಶಿಸಿ ಮಾತನಾಡಿದ ಟಿಕಾಯತ್, “ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯವು ಜಿಎಂ ಸಾಸಿವೆಯ ಪ್ರಯೋಗಕ್ಕೆ ಅನುಮೋದನೆ ನೀಡಿದೆ. ಉತ್ತರ ಪ್ರದೇಶದ ಶಹಜಹಾನ್ಪುರ ಮತ್ತು ರಾಜಸ್ಥಾನದ ಭರತ್ಪುರ ಎಂಬ ಎರಡು ಸ್ಥಳಗಳಲ್ಲಿ ಪ್ರಯೋಗಗಳನ್ನು ನಡೆಸಲು ಸಿದ್ಧತೆಗಳು ನಡೆಯುತ್ತಿವೆ. ಆದರೆ ನಾವು ಇದಕ್ಕೆ ಅವಕಾಶ ನೀಡುವುದಿಲ್ಲ ಎಂದರು.

ಹಲವಾರು ದೇಶಗಳ ವಿಜ್ಞಾನಿಗಳ ಆಕ್ಷೇಪಣೆಗಳ ನಂತರ ಜಿಎಂ ಸಾಸಿವೆಯನ್ನು ದೇಶದೊಳಗೆ ಏಕೆ ಅನುಮತಿಸಬೇಕು ಎಂಬುದಕ್ಕೆ ಯಾವುದೇ ಕಾರಣವಿಲ್ಲ. ನಾವು ಬಿಟಿ ಹತ್ತಿ ಕೃಷಿಯಲ್ಲಿ ಅಪಾರ ನಷ್ಟವನ್ನು ಅನುಭವಿಸಿದ್ದೇವೆ. ಅಷ್ಟಾದರೂ  ಜಿಎಂ ಸಾಸಿವೆಯನ್ನು ಬೆಳೆಯಲು ಅನುಮತಿಸುವ ಅಗತ್ಯವೇನಿದೆ? ದೇಶದಲ್ಲಿ ಸಾಸಿವೆಯ ಕೊರತೆ ಇದೆಯೇ? ಎಂದು ಅವರು ಪ್ರಶ್ನಿಸಿದರು.

Join Whatsapp
Exit mobile version