Home ಟಾಪ್ ಸುದ್ದಿಗಳು ಅಜಂ ಖಾನ್ ಪುತ್ರನ ವಯಸ್ಸಿನ ವಿವಾದ: ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್

ಅಜಂ ಖಾನ್ ಪುತ್ರನ ವಯಸ್ಸಿನ ವಿವಾದ: ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್

ನವದೆಹಲಿ: ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ಅವರ ಪುತ್ರ ಅಬ್ದುಲ್ಲಾ ಖಾನ್ ಅವರು 2017 ರಲ್ಲಿ ಉತ್ತರ ಪ್ರದೇಶದ ಶಾಸಕನಾಗಿ ಆಯ್ಕೆಯಾಗಲು ಬೇಕಾದ ವಯಸ್ಸು ಪೂರ್ತಿಯಾಗಿಲ್ಲ. ಆದ್ದರಿಂದ ಅವರು ಆಯ್ಕೆಗೆ ಅರ್ಹರಲ್ಲ ಎಂಬ ಅಲಹಾಬಾದ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ತಿರಸ್ಕರಿಸಿದೆ.

ನ್ಯಾಯಮೂರ್ತಿಗಳಾದ ಅಜಯ್ ರಸ್ತೋಗಿ ಮತ್ತು ಬಿ.ವಿ. ನಾಗರತ್ನ ಅವರನ್ನೊಳಗೊಂಡ ನ್ಯಾಯಪೀಠವು ಮೇಲ್ಮನವಿಯನ್ನು ವಜಾಗೊಳಿಸಿತು. ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರು ಪ್ರತ್ಯೇಕ ಸಹಮತದ ತೀರ್ಪನ್ನು ನೀಡಿದರು.

ಅಲಹಾಬಾದ್ ಹೈಕೋರ್ಟ್ ರಾಂಪುರ ಜಿಲ್ಲೆಯ ಸುವಾರ್ ವಿಧಾನಸಭಾ ಕ್ಷೇತ್ರದಿಂದ ಅಬ್ದುಲ್ಲಾ ಖಾನ್ ಅವರ ಆಯ್ಕೆಯನ್ನು ಅಸಿಂಧು ಮತ್ತು ಅನೂರ್ಜಿತ ಎಂದು ಘೋಷಿಸಿತ್ತು. ಮಾರ್ಚ್ 11, 2017 ರಂದು ಅಬ್ದುಲ್ಲಾ ಖಾನ್ ಸಮಾಜವಾದಿ ಪಕ್ಷದ ಟಿಕೆಟ್ ನಿಂದ ಶಾಸಕರಾಗಿ ಆಯ್ಕೆಯಾಗಿದ್ದರು.

Join Whatsapp
Exit mobile version