Home ಟಾಪ್ ಸುದ್ದಿಗಳು ಸಂಸದ ರಾಘವ್ ಚಡ್ಡಾ ಅಮಾನತನ್ನು ಹಿಂಪಡೆದ ರಾಜ್ಯಸಭೆ

ಸಂಸದ ರಾಘವ್ ಚಡ್ಡಾ ಅಮಾನತನ್ನು ಹಿಂಪಡೆದ ರಾಜ್ಯಸಭೆ

ದೆಹಲಿ: ಎಎಪಿ ಸಂಸದ ರಾಘವ್ ಚಡ್ಡಾ ಅವರ ಅಮಾನತು ಕ್ರಮವನ್ನು ರಾಜ್ಯಸಭೆ ಇಂದು ಹಿಂಪಡೆದಿದೆ.

ದೆಹಲಿಯಲ್ಲಿ ಕೇಂದ್ರೀಯ ಕೇಡರ್ ಅಧಿಕಾರಿಗಳ ಪೋಸ್ಟಿಂಗ್ ಮತ್ತು ವರ್ಗಾವಣೆಯ ವಿಷಯದ ಕುರಿತು ಮಾಡಿದ ಕಾನೂನಿಗೆ ಕೆಲವು ಸದಸ್ಯರಿಗೆ ಬೆಂಬಲ ಪತ್ರವನ್ನು ನೀಡಿದ ನಂತರ ರಾಘವ್ ಚಡ್ಡಾ ಅವರನ್ನು ಆಗಸ್ಟ್ 11ರಂದು ರಾಜ್ಯಸಭೆಯಿಂದ ಅಮಾನತುಗೊಳಿಸಲಾಗಿತ್ತು. ಏಕೆಂದರೆ ಪತ್ರದಲ್ಲಿ ಹೆಸರು ಬರೆದಿರುವ ಕೆಲವು ಸದಸ್ಯರು ತಮ್ಮ ಒಪ್ಪಿಗೆಯಿಲ್ಲದೆ ತಮ್ಮ ಹೆಸರನ್ನು ಬರೆಯುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ವಂಚನೆ ಮಾಡುವ ಮೂಲಕ ಸಂಸದರ ಸವಲತ್ತುಗಳನ್ನು ಉಲ್ಲಂಘಿಸಿದ್ದಾರೆ ಎಂದು ಚಡ್ಡಾ ವಿರುದ್ಧ ಆರೋಪಿಸಲಾಗಿದೆ.

Join Whatsapp
Exit mobile version