ಚೆನ್ನೈನಲ್ಲಿ ಚಂಡಮಾರುತ: ವಿಮಾನಗಳು ಬೆಂಗಳೂರಿಗೆ ಡೈವರ್ಟ್

Prasthutha|

ಬೆಂಗಳೂರು: ತಮಿಳುನಾಡಿನಲ್ಲಿ ಮಿಚಾಂಗ್ ಚಂಡಮಾರುತ ಹಿನ್ನೆಲೆ ಚೆನ್ನೈನಲ್ಲಿ ಭಾರೀ ಮಳೆಯಾಗುತ್ತಿದೆ. ಹೀಗಾಗಿ ಚೆನ್ನೈ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಬೇಕಿದ್ದ ವಿಮಾನಗಳನ್ನು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಡೈವರ್ಟ್ ಮಾಡಲಾಗಿದೆ.

- Advertisement -

ಕಳೆದ ರಾತ್ರಿಯಿಂದ ಈವರೆಗೂ 27 ವಿಮಾನಗಳು ಡೈವರ್ಟ್ ಆಗಿವೆ. ದೇಶ-ವಿದೇಶಗಳಿಂದ ಬಂದ ಎಮಿರೇಟ್ಸ್, ಲೂಫ್ತಾನ್ಸ, ಏರ್ ಇಂಡಿಯಾ ಎಕ್ಸ್ ಪ್ರೆಸ್ ಸೇರಿದಂತೆ 27 ವಿಮಾನಗಳು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿವೆ. ಹೀಗಾಗಿ ಮುಂಜಾನೆಯಿಂದ ಮತ್ತೆ ಚೆನ್ನೈಗೆ ತೆರಳಬಹುದು ಎಂದು ಪ್ರಯಾಣಿಕರು ನೀರಿಕ್ಷೆಯಿಂದ ಕಾಯುವಂತಾಗಿದೆ.



Join Whatsapp
Exit mobile version