ಮೈಸೂರು: ಭಾರತ್ ಜೋಡೋ ಯಾತ್ರೆ ಅಂಗವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೈಸೂರಿನಲ್ಲಿ ಭಾನುವಾರ ಸಂಜೆ ಸುರಿಯುತ್ತಿದ್ದ ಮಳೆಯಲ್ಲೇ ಭಾಷಣ ಮಾಡಿದ್ದಾರೆ. ಅಲ್ಲದೆ ನೆರೆದಿದ್ದ ಜನರು ಕೂಡ ಕುರ್ಚಿಗಳ ಆಶ್ರಯ ಪಡೆದು ಭಾಷಣ ಕೇಳಿದ್ದಾರೆ.
No excuses. Only passion.
— Congress (@INCIndia) October 2, 2022
There is no hurdle big enough to stop #BharatJodoYatra from achieving its goal. pic.twitter.com/puKgKeVZ1E
ಕಳೆದ ಮೂರು ದಿನಗಳಿಂದ ಚಾಮರಾಜನಗರ ಹಾಗೂ ಮೈಸೂರು ಭಾಗದಲ್ಲಿ ಯಾತ್ರೆ ಸಾಗುತ್ತಿದೆ. ಇಂದು ಮೈಸೂರಿನಲ್ಲಿ ಸಭೆ ಆಯೋಜಿಸಲಾಗಿತ್ತು. ಈ ವೇಳೆ ಮಳೆ ಸುರಿದಿದ್ದು, ರಾಹುಲ್ ಗಾಂಧಿ ಸೇರಿ ಎಲ್ಲ ನಾಯಕರು ಮಳೆಯಲ್ಲೇ ಸಭೆ ನಡೆಸಿದ್ದಾರೆ.