ಕುಸ್ತಿಪಟುಗಳಾದ ಬಜರಂಗ್ ಪುನಿಯಾ, ವಿನೇಶ್ ಫೋಗಟ್ ಭೇಟಿಯಾದ ರಾಹುಲ್ ಗಾಂಧಿ

Prasthutha|

ನವದೆಹಲಿ: ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಇಬ್ಬರು ತಾರಾ ಕುಸ್ತಿಪಟುಗಳನ್ನು ಕಣಕ್ಕಿಳಿಸಬಹುದು ಎನ್ನುವ ಊಹಾಪೋಹಗಳ ನಡುವೆ ರಾಹುಲ್ ಗಾಂಧಿಯವರು ಬಜರಂಗ್ ಪುನಿಯಾ ಮತ್ತು ವಿನೇಶ್ ಫೋಗಟ್ ಅವರನ್ನು ಭೇಟಿಯಾಗಿದ್ದಾರೆ.

- Advertisement -


ಈ ಭೇಟಿಯಿಂದಾಗಿ ಊಹೆಗೆ ಇನ್ನಷ್ಟು ಪುಷ್ಟಿ ಸಿಕ್ಕಿದೆ. ಈ ನಡುವೆ ಪುನಿಯಾ ಮತ್ತು ಫೋಗಟ್ ಕಣಕ್ಕಿಳಿಯಬಹುದೇ ಎಂಬ ಬಗ್ಗೆ ಗುರುವಾರದ ವೇಳೆಗೆ ಸ್ಪಷ್ಟತೆ ದೊರೆಯಲಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ, ಹರಿಯಾಣ ಉಸ್ತುವಾರಿ ದೀಪಕ್ ಬಬಾರಿಯಾ ಮಂಗಳವಾರ ಹೇಳಿದ್ದರು.


ಕಾಂಗ್ರೆಸ್ ತನ್ನ ಎಕ್ಸ್ ಖಾತೆಯಲ್ಲಿ ರಾಹುಲ್ ಅವರು ವಿನೇಶ್ ಮತ್ತು ಪೂನಿಯಾ ಅವರನ್ನು ಭೇಟಿಯಾದ ಫೋಟೊ ಹಂಚಿಕೊಂಡಿದೆ.

- Advertisement -



Join Whatsapp
Exit mobile version