Home ಟಾಪ್ ಸುದ್ದಿಗಳು 19ನೇ ವಯಸ್ಸಿಗೆ ಬಾಡಿಬಿಲ್ಡರ್ ಹೃದಯಾಘಾತದಿಂದ ಸಾವು

19ನೇ ವಯಸ್ಸಿಗೆ ಬಾಡಿಬಿಲ್ಡರ್ ಹೃದಯಾಘಾತದಿಂದ ಸಾವು

ಬ್ರೆಸಿಲಿಯಾ: ಬ್ರೆಜಿಲ್ ಮೂಲದ 19 ವರ್ಷದ ಮ್ಯಾಥ್ಯೂಸ್ ಪಾವ್ಲಾಕ್ ಭಾನುವಾರ (ಸೆ.01)ರಂದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.


ಮೂಲತಃ ದಕ್ಷಿಣ ಬ್ರೆಜಿಲ್ ನ ಸಾಂಟಾ ಕ್ಯಾಟರಿನಾದವರಾದ ಮ್ಯಾಥ್ಯೂಸ್ ಪಾವ್ಲಾಕ್ ದೇಹದಾರ್ಢ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ತಮ್ಮ ಹುಟ್ಟೂರಲ್ಲಿ ನಡೆದ ಸ್ಪರ್ಧೆಗಳಲ್ಲಿ 4ನೇ ಮತ್ತು 6ನೇ ಸ್ಥಾನ ಪಡೆದುಕೊಂಡಿದ್ದ ಮ್ಯಾಥ್ಯೂಸ್, 2023ರಲ್ಲಿ 23 ವರ್ಷದೊಳಗಿನ ವಿಭಾಗದ ಸ್ಪರ್ಧೆಯಲ್ಲಿ “ಮಿ. ಬ್ಲೂಮೆನೌ” ಆಗಿದ್ದರು.


ದೇಹದಾರ್ಢ್ಯದಲ್ಲಿ ತೊಡಗಲು ಕೇವಲ 5 ವರ್ಷಗಳಲ್ಲಿ ತಮ್ಮ ದೇಹವನ್ನು ಮಾರ್ಪಡಿಸಿಕೊಂಡಿದ್ದರು. ದೇಹವನ್ನು ಮಾರ್ಪಡಿಸಿಕೊಳ್ಳಲು ಔಷಧಿಗಳ ಬಳಕೆಯು ಹೃದಯಾಘಾತಕ್ಕೆ ಕಾರಣವಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಉಹಾಪೋಹಗಳು ವ್ಯಕ್ತವಾಗಿವೆ.

Join Whatsapp
Exit mobile version