Home ಟಾಪ್ ಸುದ್ದಿಗಳು ಬೆಂಗಳೂರಿನ ಕೋರ್ಟ್‌’ಗೆ ರಾಹುಲ್ ಗಾಂಧಿ: ನ್ಯಾಯಾಲಯದ ಸುತ್ತ ಬಿಗಿ ಬಂದೋಬಸ್ತ್

ಬೆಂಗಳೂರಿನ ಕೋರ್ಟ್‌’ಗೆ ರಾಹುಲ್ ಗಾಂಧಿ: ನ್ಯಾಯಾಲಯದ ಸುತ್ತ ಬಿಗಿ ಬಂದೋಬಸ್ತ್

ಬೆಂಗಳೂರು: ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದ ವೇಳೆ ಪೇಸಿಎಂ ಪೋಸ್ಟರ್ ಹಾಗೂ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದ ಆರೋಪ ಪ್ರಕರಣದಲ್ಲಿ ಇಂದು ರಾಹುಲ್‌ ಗಾಂಧಿ ಬೆಂಗಳೂರಿಗೆ ಆಗಮಿಸಿದ್ದು, ಶೀಘ್ರದಲ್ಲೇ ಕೋರ್ಟ್‌ಗೆ ಹಾಜರಾಗಲಿದ್ದಾರೆ.

ಖುದ್ದು ಜೂನ್‌ 1 ರಂದು ಕೋರ್ಟ್‌ ಗೆ ಹಾಜರಾಗುವಂತೆ ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್‌, ಸಿಎಂ, ಡಿಸಿಎಂ ಹಾಗೂ ರಾಹುಲ್ ಗಾಂಧಿಗೆ ನೋಟಿಸ್ ನೀಡಿತ್ತು. ಅದರಂತೆ ಸಿಎಂ ಡಿಸಿಎಂ ಹಾಜರಾಗಿದ್ದರು. ಆದರೆ ರಾಹುಲ್ ಗಾಂಧಿ ಹಾಜರಾಗಿರಲಿಲ್ಲ.

ಹೀಗಾಗಿ ಇಂದು ರಾಹುಲ್‌ ಗಾಂಧಿ ಕೋರ್ಟ್‌ ಎದುರು ಹಾಜರಾಗಲಿದ್ದಾರೆ.

ಬಿಜೆಪಿ ಎಂಎಲ್‌ಸಿ ಮತ್ತು ಪ್ರಧಾನ ಕಾರ್ಯದರ್ಶಿ ಕೇಶವ ಪ್ರಸಾದ್ ಅವರು ಸಿದ್ದರಾಮಯ್ಯ, ಶಿವಕುಮಾರ್ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.

ರಾಹುಲ್ ಗಾಂಧಿ ಬೆಂಗಳೂರಿಗೆ ಬಂದಿರುವುದರಿಂದ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಹಾಜರಾಗಿದ್ದಾರೆ. ಕೋರ್ಟ್ ಬಳಿಯೂ ಸೇರುವ ನಿರೀಕ್ಷೆ ಇದ್ದು ನೂಕುನುಗ್ಗನು ತಡೆಯಲು ಹಾಗು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ಕೋರ್ಟ್ ಸುತ್ತಾಮುತ್ತಾ ಪೊಲೀಸ್ ಬಿಗಿಬಂದೋಬಸ್ತು ಏರ್ಪಡಿಸಲಾಗಿದೆ.

Join Whatsapp
Exit mobile version