Home ಟಾಪ್ ಸುದ್ದಿಗಳು ರಿಪಬ್ಲಿಕ್ ಟಿವಿಗೆ ಜಾಹೀರಾತು ನೀಡಲ್ಲ : ಉದ್ಯಮಿ ರಾಹುಲ್ ಬಜಾಜ್ ಮಹತ್ವದ ಹೇಳಿಕೆ

ರಿಪಬ್ಲಿಕ್ ಟಿವಿಗೆ ಜಾಹೀರಾತು ನೀಡಲ್ಲ : ಉದ್ಯಮಿ ರಾಹುಲ್ ಬಜಾಜ್ ಮಹತ್ವದ ಹೇಳಿಕೆ

►‘ಉದ್ಯಮದಲ್ಲಿ ಲಾಭ ಮಾತ್ರವಲ್ಲ, ಸಮಾಜದ ಸ್ವಾಸ್ಥ್ಯವೂ ಮುಖ್ಯ’

ಹೊಸದಿಲ್ಲಿ: ಸಮಾಜದಲ್ಲಿ ನಂಜು, ದ್ವೇಷ ಹರಡುವ ಸುದ್ದಿ ಚಾನೆಲ್ ಆಗಿರುವ ರಿಪಬ್ಲಿಕ್ ಟಿವಿ ಸೇರಿದಂತೆ ಮೂರು ಚಾನೆಲ್ ಗಳಿಗೆ ಇನ್ನು ಮುಂದೆ ಜಾಹೀರಾತು ನೀಡುವುದಿಲ್ಲ ಎಂದು ಖ್ಯಾತ ಉದ್ಯಮಿ ಹಾಗೂ ಬಜಾಜ್ ಆಟೋ ಮುಖ್ಯಸ್ಥ ರಾಹುಲ್ ಬಜಾಜ್ ಹೇಳಿದ್ದಾರೆ. ಈ ಚಾನೆಲ್ ಗಳನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ. ಈ ನಿರ್ಧಾರವನ್ನು ನಮ್ಮ ಸಂಸ್ಥೆಯ ಮಾರ್ಕೆಟಿಂಗ ಮುಖ್ಯಸ್ಥರು ಈ ಹಿಂದೆಯೇ ಕಾರ್ಯರೂಪಕ್ಕೆ ತಂದಿರುವರಾದರೂ ಇದೀಗ ಅದನ್ನು ಬಹಿರಂಗವಾಗಿ ಹೇಳುತ್ತಿದ್ದೇನೆ ಎಂದು ರಾಹುಲ್ ಹೇಳಿದ್ದಾರೆ.

ರಿಪಬ್ಲಿಕ್ ಟಿವಿ ಹಾಗೂ ಇತರೆ ಕೆಲ ಚಾನೆಲ್ ಗಳು ಟಿ ಆರ್ ಪಿ ಗಾಗಿ ಅಕ್ರಮ ಮಾರ್ಗದಲ್ಲಿ ಹಗರಣಗಳ ನಡೆಸಿತ್ತು ಎಂದು ಮುಂಬೈ ಪೊಲೀಸ್ ಮಹಾನಿರ್ದೇಶಕ ಪರಂವೀರ್ ಸಿಂಗ್ ನಿನ್ನೆಯಷ್ಟೇ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದರು. ಮುಂಬೈ ಪೊಲೀಸ್ ಇದೀಗಾಗಲೇ ಆ ಕುರಿತು ತನಿಖೆಯನ್ನು ಆರಂಭಿಸಿದೆ.

ಉದ್ಯಮದಲ್ಲಿ ಬ್ರಾಂಡ್ ಪ್ರಧಾನ ಪಾತ್ರ ವಹಿಸುತ್ತದೆ ನಿಜ. ಆದರೆ ಲಾಭ ಮಾತ್ರವೇ ಸಂಸ್ಥೆಗಳ ಉದ್ದೇಶವಾಗಬಾರದು. ಸಮಾಜದ ಒಳಿತನ್ನೂ ಯೋಚಿಸಬೇಕು. ದ್ವೇಷ ಹರಡಿ ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವವರ ಕುರಿತು ಎಚ್ಚರಿಕೆ ವಹಿಸಬೇಕು.  ನಾನು ಈ ಮೂರು ಚಾನೆಲ್ ಗಳನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ನನ್ನ ಮಾರ್ಕೆಟಿಂಗ್ ವ್ಯವಸ್ಥಾಪಕರಲ್ಲಿ ಹೇಳಿದಾಗ, ನಾನದನ್ನು 9 ತಿಂಗಳ ಹಿಂದೆಯೇ ಮಾಡಿದ್ದೇನೆ ಎಂದವರು ಹೇಳಿದಾಗ ನನಗೆ ಆಶ್ಚರ್ಯವಾಯಿತು ಎಂದು ರಾಹುಲ್ ಬಜಾಜ್ ಹೇಳಿದ್ದಾರೆ.

Join Whatsapp
Exit mobile version