ಅಹ್ಮದಾಬಾದ್: ಗೋಧ್ರಾ ರೈಲಿ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗೆ ಗೋಧ್ರಾ ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ರಫೀಕ್ ಹುಸೈನ್ ಭಾಟುಕ್ ಜೀವಾವಧಿ ಶಿಕ್ಷೆಗೊಳಗಾದವರು.
ಹತ್ಯೆ ಪಿತೂರಿ ಆರೋಪದಲ್ಲಿ ನ್ಯಾಯಾಲಯ ಆರೋಪಿಗೆ ಶಿಕ್ಷೆ ನೀಡಿದೆ ಎಂದು ಸರ್ಕಾರಿ ಅಭಿಯೋಜಕ ಆರ್.ಸಿ. ಕೊಡೇಕರ್ ಹೇಳಿದ್ದಾರೆ.
19 ವರ್ಷ ಕಾಲ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಗುಜರಾತ್ ಪೊಲೀಸರು ಗೋಧ್ರಾ ಪಟ್ಟಣದಲ್ಲಿ ಕಳೆದ ವರ್ಷದ ಫೆಬ್ರುವರಿಯಲ್ಲಿ ಬಂಧಿಸಿದ್ದರು. ಈ ಸಂಚಿನಲ್ಲಿ ಷಾಮೀಲಾಗಿದ್ದ “ಕೋರ್ ಗುಂಪಿನಲ್ಲಿ” ಭಟೂಕ್ ಸೇರಿದ್ದ ಎಂದು ಪೊಲೀಸರು ಹೇಳಿದ್ದರು. ಶನಿವಾರ ಗೋಧ್ರಾ ಸೆಷನ್ಸ್ ನ್ಯಾಯಾಲಯವು ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.