Home ವಿದೇಶ ದೇಶ ತೊರೆಯುವಂತೆ ಹಮಾಸ್ ನಾಯಕರಿಗೆ ಕತಾರ್ ನಿರ್ದೇಶನ

ದೇಶ ತೊರೆಯುವಂತೆ ಹಮಾಸ್ ನಾಯಕರಿಗೆ ಕತಾರ್ ನಿರ್ದೇಶನ

ಗಾಝಾ ಕದನ ವಿರಾಮ ಮತ್ತು ಒತ್ತೆಯಾಳು ಬಿಡುಗಡೆ ಒಪ್ಪಂದಕ್ಕಾಗಿ ಸುದೀರ್ಘ ಮಾತುಕತೆಗಳ ಮಧ್ಯೆ ಇಸ್ರೇಲ್ ಮತ್ತು ಹಮಾಸ್ ನಡುವಿನ ಮಧ್ಯವರ್ತಿಯಾಗಿ ಕತಾರ್ ತನ್ನ ಪಾತ್ರವನ್ನು ಕೊನೆಗೊಳಿಸಲು ನಿರ್ಧರಿಸಿದೆ ಎಂದು ಈ ವಿಷಯದ ಬಗ್ಗೆ ತಿಳಿದಿರುವ ರಾಜತಾಂತ್ರಿಕರೊಬ್ಬರು ಶನಿವಾರದಂದು ಟೈಮ್ಸ್ ಆಫ್ ಇಸ್ರೇಲ್‌ಗೆ ತಿಳಿಸಿರುವ ಕುರಿತು ವರದಿಯಾಗಿದೆ.

ಕಳೆದ ತಿಂಗಳ ಕೊನೆಯಲ್ಲಿ ಹಮಾಸ್ ಅಧಿಕಾರಿಗಳಿಗೆ ದೇಶವನ್ನು ತೊರೆಯುವಂತೆ ಹೇಳಿದರು ಎಂದು ಯುಎಸ್ ಮೂಲಗಳು ಶುಕ್ರವಾರ ದೃಢಪಡಿಸಿತ್ತು. ಬಿಡೆನ್ ಆಡಳಿತದ ಮನವಿಗೆ ಸಂಬಂಧಿಸಿದಂತೆ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂಬುವುದನ್ನು ಕತಾರ್ ನಿರಾಕರಿಸಿದೆ.

ಕತಾರ್ ಮಧ್ಯಸ್ಥಿಕೆ ಪ್ರಯತ್ನಗಳನ್ನು ನಿಲ್ಲಿಸುವ ತನ್ನ ನಿರ್ಧಾರವನ್ನು ಅಧಿಕೃತವಾಗಿ ದೃಢಪಡಿಸಿತು. ಆದರೆ ಎರಡೂ ಪಕ್ಷಗಳು ಮರು- ತೊಡಗಿಸಿಕೊಳ್ಳಲು ಇಚ್ಛೆಯನ್ನು ಪ್ರದರ್ಶಿಸಿದರೆ ನಿರ್ಧಾರವನ್ನು ಹಿಂಪಡೆಯಬಹುದೆಂದು ತಿಳಿಸಿದೆ. ವಿದೇಶಾಂಗ ಸಚಿವಾಲಯವು ವಿಷಯದ ಕುರಿತು ಪ್ರತಿಕ್ರಿಯಿಸಿ ದೋಹಾದಲ್ಲಿ ಹಮಾಸ್ ಕಚೇರಿಯನ್ನು ಮುಚ್ಚುವ ಕತಾರ್‌ನ ನಿರ್ಧಾರದ ಬಗ್ಗೆ “ಕರಾರುವಾಕ್ಕಿಲ್ಲ” ಎಂದು ಹೇಳಿಕೊಂಡಿದೆ.

Join Whatsapp
Exit mobile version