ಪುತ್ತೂರು: ಪ್ರಯಾಣಿಕರೊಬ್ಬರು KSRTC ಬಸ್ ನಿಂದ ಬಿದ್ದು ಮೃತಪಟ್ಟ ಘಟನೆ ಪುತ್ತೂರು ತಾಲೂಕಿನ ಕೆಮ್ಮಾಯಿ ಸಮೀಪ ನಡೆದಿದೆ.
ಕೆದಿಲ ನಿವಾಸಿ ಸೋಮಪ್ಪ ನಾಯಕ ಮೃತ ವ್ಯಕ್ತಿ. ಪುತ್ತೂರಿನಿಂದ ಉಪ್ಪಿನಂಗಡಿಗೆ ತೆರಳುತ್ತಿದ್ದ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಸೋಮಪ್ಪ ಕೆಮ್ಮಾಯಿ ಬಳಿ ಬಸ್ ನಿಲ್ಲಿಸುವಾಗ ಬಸ್ ನಿಂದ ಬಿದ್ದು ಗಂಭೀರ ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.