Home ಟಾಪ್ ಸುದ್ದಿಗಳು ಪಂಜಾಬ್: ಭಗತ್ ಸಿಂಗ್ ಸ್ವ- ಗ್ರಾಮದಲ್ಲಿ ಪ್ರಮಾಣ ವಚನ ಸ್ವೀಕರಿಸಲಿರುವ ನೂತನ ಮುಖಮಂತ್ರಿ

ಪಂಜಾಬ್: ಭಗತ್ ಸಿಂಗ್ ಸ್ವ- ಗ್ರಾಮದಲ್ಲಿ ಪ್ರಮಾಣ ವಚನ ಸ್ವೀಕರಿಸಲಿರುವ ನೂತನ ಮುಖಮಂತ್ರಿ

ಅಮೃತಸರ: ಪಂಜಾಬ್ ನೂತನ ಮುಖಮಂತ್ರಿ, ಆಮ್ ಆದ್ಮಿ ಮುಖಂಡ ಭಗವಂತ್ ಮಾನ್ನ್ ಅವರು ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಸ್ವ-ಗ್ರಾಮದಲ್ಲಿ ಪ್ರಮಾಣ ವಚನದಲ್ಲಿ ಸ್ವೀಕರಿಸಲಿದ್ದಾರೆ ಎಂದು ಹೇಳಲಾಗಿದೆ.

ರಾಜಭವನದ ಮುಂಭಾಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಚುನಾಯಿತ ಮುಖ್ಯಮಂತ್ರಿ ಭಗವತ್ ಮಾನ್ನ್ ಅವರು ಶನಿವಾರ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರನ್ನು ಭೇಟಿ ಮಾಡಿ ನೂತನ ಸರ್ಕಾರ ರಚನೆಯ ಹಕ್ಕನ್ನು ಮಂಡಿಸಲಿದ್ದೇನೆ. ಮಾರ್ಚ್ 16 ರಂದು ಮಧ್ಯಾಹ್ನ 12.30 ಕ್ಕೆ ಭಗತ್ ಸಿಂಗ್ ಸ್ವಗ್ರಾಮದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ತಿಳಿಸಿದ್ದಾರೆ.

ಪಂಜಾಬ್’ನ ಪ್ರತಿ ಮನೆಯ ಜನರು ಈ ಸಮಾರಂಭದಲ್ಲಿ ಬರಲಿದ್ದಾರೆ ಮತ್ತು ಭಗತ್ ಸಿಂಗ್’ಗೆ ಗೌರವ ಸಲ್ಲಿಸಲಿದ್ದಾರೆ. ಪಂಜಾಬ್ ಸರ್ಕಾರದಲ್ಲಿ ನೂತನ ಕ್ಯಾಬಿನೆಟ್ ಹೊಂದಲಿದ್ದು, ಹಿಂದೆಂದೂ ಮಾಡದ ಐತಿಹಾಸಿಕ ನಿರ್ಧಾರ ನಿರ್ವಹಿಸಲಿದೆ ಎಂದು ಭಗವಂತ್ ಮಾನ್ನ್ ಅವರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಮುಖ್ಯಮಂತ್ರಿ ಹೊರತಾಗಿ 17 ಮಂದಿ ಸಚಿವ ಸಂಪುಟದಲ್ಲಿ ಮಂತ್ರಿಗಳಾಗಲಿದ್ದಾರೆ. ಇದರಿಂದ ಯಾರೂ ಅಸಮಾಧಾನ ಹೊಂದಬೇಕಾಗಿಲ್ಲ. ಜಯಗಳಿಸಿದ ಪ್ರತಿಯೊಬ್ಬರೂ ಮಂತ್ರಿಗಳು ಎಂದು ಮುಖ್ಯಮಂತ್ರಿ ಒಳಗೊಂಡಂತೆ 92 ಶಾಸಕರಿಗೆ ಸಲಹೆ ನೀಡಿದ್ದಾರೆ.

117 ಸದಸ್ಯ ಬಲದ ಅಸೆಂಬ್ಲಿಯಲ್ಲಿ ಎಎಪಿ 92 ಸ್ಥಾನಗಳನ್ನು ಗಳಿಸುವ ಮೂಲಕ ಚುನಾವಣೆಯಲ್ಲಿ ಭಾರಿ ಗೆಲುವು ದಾಖಲಿಸಿದೆ.

Join Whatsapp
Exit mobile version