Home ಟಾಪ್ ಸುದ್ದಿಗಳು ಪುಲಿಟ್ಜರ್ ಪ್ರಶಸ್ತಿ ವಿಜೇತೆ ಸನ್ನಾ ಇರ್ಷಾದ್ ಮಟ್ಟೂಗೆ ತಡೆ: ಪ್ರಕರಣವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಎಂದ ಅಮೆರಿಕ

ಪುಲಿಟ್ಜರ್ ಪ್ರಶಸ್ತಿ ವಿಜೇತೆ ಸನ್ನಾ ಇರ್ಷಾದ್ ಮಟ್ಟೂಗೆ ತಡೆ: ಪ್ರಕರಣವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಎಂದ ಅಮೆರಿಕ

ವಾಷಿಂಗ್ಟನ್: ಮಾನ್ಯತೆ ಹೊಂದಿದ ಪಾಸ್ಪೋರ್ಟ್ ಮತ್ತು ಯುಎಸ್ ವೀಸಾದ ಹೊರತಾಗಿಯೂ ತನ್ನ ಪ್ರಶಸ್ತಿಯನ್ನು ಸ್ವೀಕರಿಸಲು ನ್ಯೂಯಾರ್ಕ್ ಗೆ ಪ್ರಯಾಣಿಸುವುದನ್ನು ನವದೆಹಲಿಯ ವಲಸೆ ಅಧಿಕಾರಿಗಳು ತಡೆದಿದ್ದಾರೆ ಎಂದ  ಪುಲಿಟ್ಜರ್ ಪ್ರಶಸ್ತಿ ವಿಜೇತೆ ಸನ್ನಾ ಇರ್ಷಾದ್ ಮಟ್ಟೂ ಅವರ ಪ್ರಕರಣವನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವುದಾಗಿ ಅಮೆರಿಕ ಹೇಳಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೌಸ್ ಇಂಟೆಲಿಜೆನ್ಸ್ ಕಮಿಟಿಯ ಅಧ್ಯಕ್ಷ ಯುಎಸ್ ಕಾಂಗ್ರೆಸ್ ಸದಸ್ಯ ಆಡಮ್ ಸ್ಕಿಫ್,  ಪುಲಿಟ್ಜರ್ ಅನ್ನು ಸ್ವೀಕರಿಸಲು ಮಟ್ಟೂ ಅವರನ್ನು ಪ್ರಯಾಣಿಸದಂತೆ ನಿರ್ಬಂಧಿಸಲಾಗಿದೆ. ಈ ರೀತಿ ಮಾಧ್ಯಮಗಳಿಗೆ ಕಿರುಕುಳ ನೀಡುವ ಮತ್ತು ಅವರನ್ನು ಮೌನವಾಗಿರಿಸುವ  ಪ್ರಯತ್ನಗಳು  ಕೊನೆಗೊಳ್ಳಬೇಕು ಎಂದು ಹೇಳಿದ್ದಾರೆ.

ನ್ಯೂಯಾರ್ಕ್ ಗೆ ಪ್ರಯಾಣಿಸದಂತೆ ತನ್ನನ್ನು ತಡೆಯಲಾಗಿದೆ ಎಂದು ಮಟ್ಟೂ ಅವರ ಹೇಳಿಕೆಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ವಿದೇಶಾಂಗ ಇಲಾಖೆಯ ಉಪ ವಕ್ತಾರ ವೇದಾಂತ್ ಪಟೇಲ್, ವರದಿಗಳ ಬಗ್ಗೆ ಅಮೆರಿಕಕ್ಕೆ ತಿಳಿದಿದೆ ಎಂದು ಹೇಳಿದರು.

ಮಟ್ಟೂ ಅವರನ್ನು ಅಮೆರಿಕಕ್ಕೆ ಪ್ರಯಾಣಿಸದಂತೆ ತಡೆಯಲಾಗಿದೆ ಎಂಬ ವರದಿಗಳ ಬಗ್ಗೆ ನಮಗೆ ತಿಳಿದಿದೆ ಮತ್ತು ಈ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ  ಗಮನಿಸುತ್ತಿದ್ದೇವೆ. ಪತ್ರಿಕಾ ಸ್ವಾತಂತ್ರ್ಯವನ್ನು ಬೆಂಬಲಿಸಲು ನಾವು ಬದ್ಧರಾಗಿದ್ದೇವೆ ಎಂದು ಎಂದು ಪಟೇಲ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Join Whatsapp
Exit mobile version