Home ಟಾಪ್ ಸುದ್ದಿಗಳು ಪೊಲೀಸ್ ಕಾನ್ಸ್ ಸ್ಟೆಬಲ್ ಹುದ್ದೆಗೆ ಅರ್ಜಿ ಆಹ್ವಾನ: ACE IAS ಅಕಾಡೆಮಿಯಿಂದ ಉಚಿತ ಹೆಲ್ಪ್ ಡೆಸ್ಕ್...

ಪೊಲೀಸ್ ಕಾನ್ಸ್ ಸ್ಟೆಬಲ್ ಹುದ್ದೆಗೆ ಅರ್ಜಿ ಆಹ್ವಾನ: ACE IAS ಅಕಾಡೆಮಿಯಿಂದ ಉಚಿತ ಹೆಲ್ಪ್ ಡೆಸ್ಕ್ ಸರ್ವೀಸ್ ಆರಂಭ

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ  ಖಾಲಿ ಇರುವ  ಜಿಲ್ಲಾ ಮತ್ತು ನಗರ (DAR & CAR) ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ ಗಳ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಪುರಷ ಮತ್ತು ಮಹಿಳಾ ಸೇರಿದಂತೆ 3000ಕ್ಕೂ ಹೆಚ್ಚು ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಅಕ್ಟೋಬರ್ 31 ಆಗಿದೆ.

ಈ ನೇಮಕಾತಿ ಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ.

ಅರ್ಜಿಸಲ್ಲಿಕೆಗೆ ಬೇಕಾಗುವ ದಾಖಲೆಗಳು:

> ಭಾವಚಿತ್ರ

> ಆಧಾರ್ ಕಾರ್ಡ್

> SSLC ಅಂಕಪಟ್ಟಿ

> ಎಡಗೈ ಹೆಬ್ಬೆರಳಿನ ಅಚ್ಚು

> ಪಿ.ಯು.ಸಿ , ಪದವಿ ಆಗಿದ್ದಲ್ಲಿ ದಾಖಲೆಗಳು

> ಮೀಸಲಾತಿ (ಬೇಕಿದ್ದಲ್ಲಿ)ಗೆ ಅದರ ದಾಖಲೆಗಳು ( ಕನ್ನಡ, ಗ್ರಾಮೀಣ, SC /ST /2B/OBC…)

ವಯಸ್ಸು: 31/10/2022 ಕ್ಕೆ ಕನಿಷ್ಠ 18 ಹಾಗೂ ಗರಿಷ್ಠ 27 ವರ್ಷದ ಒಳಗೆ ಇರಬೇಕು.

ವಿದ್ಯಾರ್ಹತೆ: SSLC

ವೇತನ: Rs. 25,000 — 45000/- (approx).

ದೇಹದಾರ್ಢ್ಯತೆ:

ಎಲ್ಲಾ ಸಾಮಾನ್ಯ ಪುರುಷ ಅಭ್ಯರ್ಥಿಗಳಿಗೆ ಕನಿಷ್ಠ ಎತ್ತರ 168 ಸೆಂ.ಮೀ. ಹಾಗೂ ಕನಿಷ್ಠ ಎದೆ ಸುತ್ತಳತೆ 86 ಸೆಂ.ಮೀ. ಹೊಂದಿರಬೇಕು.

ಹೆಚ್ಚಿನ ಮಾಹಿತಿಗಾಗಿ  ಇಲ್ಲಿ ಸಂಪರ್ಕಿಸಬಹುದು:

ಏಸ್ ಐಎಎಸ್ ಅಕಾಡೆಮಿ

2ನೇ ಮಹಡಿ

ಗೋಲ್ಡನ್ ಆರ್ಕೇಡ್ ಬಿಲ್ಡಿಂಗ್,

ಎಂಪೈರ್ ಮಾಲ್ ಎದುರು

ಎಂ.ಜಿ. ರಸ್ತೆ, ಮಂಗಳೂರು

70901 09997 / 96864 04245

ಪೊಲೀಸ್ ಹುದ್ದೆಯ ಅರ್ಜಿಗಳಿಗಾಗಿ ಈ ವೆಬ್ ಸೈಟ್ ಅನ್ನು ಸಂಪರ್ಕಿಸಿ www.ksp-recruitment.in

Join Whatsapp
Exit mobile version