Home ಟಾಪ್ ಸುದ್ದಿಗಳು ಇನ್ನು ಮುಂದೆ ಪಿಯು ಕಾಲೇಜುಗಳು ‘ಹಿರಿಯ ಪ್ರೌಢಶಾಲೆ’

ಇನ್ನು ಮುಂದೆ ಪಿಯು ಕಾಲೇಜುಗಳು ‘ಹಿರಿಯ ಪ್ರೌಢಶಾಲೆ’

ಸಾಂದರ್ಭಿಕ ಚಿತ್ರ

►ಪ್ರೌಢಶಾಲೆ, ಪಿಯು ಪರೀಕ್ಷಾ ವಿಭಾಗಗಳನ್ನು ವಿಲೀನಗೊಳಿಸಿದ ರಾಜ್ಯ ಸರ್ಕಾರ

ಬೆಂಗಳೂರು: ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಅನ್ವಯ, ಪದವಿಪೂರ್ವ ಕಾಲೇಜುಗಳನ್ನು ‘ಹಿರಿಯ ಪ್ರೌಢಶಾಲೆಗಳು’ ಎಂದು ಪರಿಗಣಿಸಲಾಗುವುದು ಎಂದು ಶಿಕ್ಷಣ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ.

ಪರೀಕ್ಷಾ ಮಂಡಳಿ ತಿದ್ದುಪಡಿ ಕಾಯ್ದೆಯು ಪಿಯು ಪರೀಕ್ಷಾ ವಿಭಾಗಗಳನ್ನು ಪ್ರೌಢಶಾಲಾ ಪರೀಕ್ಷಾ ವಿಭಾಗಗಳೊಂದಿಗೆ ವಿಲೀನಗೊಳಿಸಿದ್ದು, ಈ ಬದಲಾವಣೆಗೆ ಉಪನ್ಯಾಸಕ ವರ್ಗದಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಪದವಿಪೂರ್ವ ಕಾಲೇಜುಗಳನ್ನು ಹಿರಿಯ ಪ್ರೌಢಶಾಲೆಗಳೆಂದು ಪರಿಗಣಿಸುವುದರೊಂದಿಗೆ ಪ್ರಥಮ, ದ್ವಿತೀಯ ಪಿಯುಸಿಗಳನ್ನು 11 ಹಾಗೂ 12ನೇ ತರಗತಿ ಎಂದು ಗುರುತಿಸಲಾಗುತ್ತದೆ. ಆದರೆ, ಕಾಲೇಜು ಮುಖ್ಯಸ್ಥರಾದ ಪ್ರಾಂಶುಪಾಲರು, ಉಪನ್ಯಾಸಕರ ಪದನಾಮಗಳನ್ನು ಈವರೆಗೆ ಬದಲಾವಣೆ ಮಾಡಿಲ್ಲ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕಾಗಿ ರೂಪಿಸಲಾಗಿರುವ ಕಾರ್ಯಪಡೆ ಅಧ್ಯಕ್ಷ ಮದನ್ ಗೋಪಾಲ್ ಅವರ ವರದಿಯ ನಂತರ ಪದನಾಮಗಳು, ಪದವಿಪೂರ್ವ ಶಿಕ್ಷಣದ ಸ್ವರೂಪ‍ ಬದಲಾಗಲಿವೆ.

Join Whatsapp
Exit mobile version