Home ಟಾಪ್ ಸುದ್ದಿಗಳು ಹಾಸನದಲ್ಲಿ ಮಿಕ್ಸಿ ಬ್ಲಾಸ್ಟ್: ಓರ್ವನಿಗೆ ಗಂಭೀರ ಗಾಯ, ಊಹಾಪೋಹ, ಗೊಂದಲ ಬೇಡ ಎಂದ ಎಸ್.ಪಿ

ಹಾಸನದಲ್ಲಿ ಮಿಕ್ಸಿ ಬ್ಲಾಸ್ಟ್: ಓರ್ವನಿಗೆ ಗಂಭೀರ ಗಾಯ, ಊಹಾಪೋಹ, ಗೊಂದಲ ಬೇಡ ಎಂದ ಎಸ್.ಪಿ

ಹಾಸನ: ಅಂಗಡಿಯಲ್ಲಿ ಮಿಕ್ಸಿ ಬ್ಲಾಸ್ಟ್ ಆಗಿ ಮಾಲೀಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಹಾಸನದಲ್ಲಿ ನಡೆದಿದೆ.

ಸೋಮವಾರ ಸಂಜೆ 7:30ರ ವೇಳೆ ಈ ಘಟನೆ ನಡೆದಿದ್ದು,  ಕೊರಿಯರ್’ ನಲ್ಲಿ ಬಂದಿದ್ದ ಮಿಕ್ಸಿಯನ್ನು ತೆರೆಯುವ ಸಂದರ್ಭದಲ್ಲಿ ಅದು ಸ್ಫೋಟಗೊಂಡಿದೆ ಎಂದು ಹೇಳಲಾಗುತ್ತಿದೆ.

ಇದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.

ಘಟನೆಯ ಕುರಿತು ಮಾತನಾಡಿದ ಎಸ್. ಪಿ. ಹರಿರಾಮ್ ಶಂಕರ್, ಗಾಯಾಳುವಿಗೆ ಯಾವುದೇ ಪ್ರಾಣಾಪಾಯ ಆಗಿಲ್ಲ. ಮಿಕ್ಸಿ ಬ್ಲೇಡ್ ತಾಗಿ ಅವರಿಗೆ ಪೆಟ್ಟಾಗಿದೆ. ಮೈಸೂರಿನಿಂದ ಎಫ್ ಎಸ್ ಎಲ್ ತಂಡ ಆಗಮಿಸಿ, ಪರಿಶೀಲನೆ ನಡೆಸಲಿದೆ. ಕೊರಿಯರ್ ಎಲ್ಲಿಂದ ಬಂತು ಎನ್ನುವ ಮಾಹಿತಿ ಇದೆ. ಯಾವುದೇ ಊಹಾಪೋಹ, ಗೊಂದಲ ಬೇಡ. ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.

Join Whatsapp
Exit mobile version