Home ಟಾಪ್ ಸುದ್ದಿಗಳು ಯುವಕರ ‘ಪಬ್ ಜಿ’ ಮೋಹಕ್ಕೆ ಬ್ರೇಕ್! ‘ಪಬ್ ಜಿ’ ಸೇರಿದಂತೆ 118 ಚೀನಾ ಆಪ್ ಗಳನ್ನು...

ಯುವಕರ ‘ಪಬ್ ಜಿ’ ಮೋಹಕ್ಕೆ ಬ್ರೇಕ್! ‘ಪಬ್ ಜಿ’ ಸೇರಿದಂತೆ 118 ಚೀನಾ ಆಪ್ ಗಳನ್ನು ನಿಷೇಧಿಸಿದ ಕೇಂದ್ರ ಸರಕಾರ

ಭಾರತ ಚೀನ ಗಡಿ ಸಂಘರ್ಷ ಮುಂದುವರೆದಿರುವಂತೆಯೇ ಕೇಂದ್ರ ಸರಕಾರ ಯುವಕರ ಗೇಮಿಂಗ್ ಆಪ್ ಆಗಿರುವ ‘ಪಬ್ ಜಿ’ ಸೇರಿದಂತೆ ಒಟ್ಟು 118 ಚೀನಾ ನಿರ್ಮಿತ ಆಪ್ ಗಳ್ ಮೇಲೆ ನಿಷೇಧ ವಿಧಿಸಿದೆ.

33 ಮಿಲಿಯನ್ ಬಳಕೆದಾರರನ್ನು ಹೊಂದಿರುವ ‘ಪಬ್ ಜಿ ಮೊಬೈಲ್’ ಆಪ್ ಮೇಲೆ 69ಎ ಐಟಿ ಕಾಯ್ದೆಯ ಪ್ರಕಾರ  ನಿಷೇಧ ವಿಧಿಸಲಾಗಿದೆ.  

ಲಡಾಖ್ ಗಡಿಯಲ್ಲಿ ಚೀನಾದ ಅತಿಕ್ರಮ ಪ್ರವೇಶದ ವಿರುದ್ಧ ಈ ಕ್ರಮ ಎನ್ನಲಾಗಿದ್ದು, ಆ ಮೂಲಕ ಮತ್ತೊಮ್ಮೆ ಕೇಂದ್ರ ಸರ್ಕಾರ ಆಪ್ ಮೂಲಕ ಚೀನಾಕ್ಕೆ ಎದುರೇಟು ನೀಡುವ ಪ್ರಯತ್ನ ನದೆಸಿದೆ ಎನ್ನಲಾಗಿದೆ

Join Whatsapp
Exit mobile version