Home ಟಾಪ್ ಸುದ್ದಿಗಳು ಜೂನ್ 1 ರಿಂದ ಹಾಜಬ್ಬರ ಕನಸಿನ ಪಿಯು ಕಾಲೇಜು ಪ್ರಾರಂಭ

ಜೂನ್ 1 ರಿಂದ ಹಾಜಬ್ಬರ ಕನಸಿನ ಪಿಯು ಕಾಲೇಜು ಪ್ರಾರಂಭ

►ಎಸೆಸೆಲ್ಸಿ ಪರೀಕ್ಷೆ : ಹರೇಕಳ ಹಾಜಬ್ಬ ಶಾಲೆಗೆ ಶೇ.100 ಫಲಿತಾಂಶ

ಹರೇಕಳ : ಅಕ್ಷರ ಸಂತ ಪದ್ಮಶ್ರೀ ಹರೇಕಳ ಹಾಜಬ್ಬರ ದ.ಕ.ಜಿ.ಪಂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನ್ಯೂಪಡ್ಪು ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ದಾಖಲಿಸಿ ವಿಶಿಷ್ಟ ಸಾಧನೆ ಮಾಡಿದೆ.

ಹರೇಕಳ ಹಾಜಬ್ಬರ ಶಾಲೆಯಿಂದ 8 ಬಾಲಕರು ಮತ್ತು 11 ಬಾಲಕಿಯರು ಸೇರಿದಂತೆ ಒಟ್ಟು 19 ವಿದ್ಯಾರ್ಥಿಗಳ ಪೈಕಿ 9 ಮಂದಿ ಪ್ರಥಮ ದರ್ಜೆಯಲ್ಲಿ, 4 ಮಂದಿ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಆಯಿಷತ್ ತಸ್ಫಿಯ 494 (79.04%) ಅಂಕ ಗಳಿಸುವ ಮೂಲಕ ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದಾಳೆ. ಶಫಿಯ 482 (77.12%) ದ್ವಿತೀಯ ಮತ್ತು ಫರ್ಹಾನ 454 (72.64%,) ತೃತೀಯ ಅಂಕ  ಗಳಿಸಿದ್ದಾರೆ.

► ಹಾಜಬ್ಬರ ಕನಸಿನ ಪಿಯು ಕಾಲೇಜ್ ಪ್ರಾರಂಭ

ಹರೇಕಳ ಹಾಜಬ್ಬರ ಪಿಯುಸಿ ಕಾಲೇಜ್ ತೆರೆಯುವ ಕನಸು ಈಗ ನನಸಾಗಿದ್ದು, ಪ್ರವೇಶ ಪ್ರಕ್ರಿಯೆ ಪ್ರಾರಂಭಗೊಂಡಿದ್ದು, ಪ್ರಭಾರ ಪ್ರಾಂಶುಪಾಲರು ನಿಯೋಜನೆಗೊಂಡಿದ್ದಾರೆ.

ಹಾಜಬ್ಬರ ಅವಿರತ ಪ್ರಯತ್ನದ ಫಲವಾಗಿ ಈ ಶೈಕ್ಷಣಿಕ ವರ್ಷದಿಂದ ಕಲಾ ಮತ್ತು ವಾಣಿಜ್ಯ ವಿಭಾಗದ ತರಗತಿಗಳು ಜೂನ್ 1 ರಿಂದ ಆರಂಭವಾಗಲಿದೆ. ಹಿರಿಯ ಉಪನ್ಯಾಶಕ ಅಬ್ದುಲ್ ರಝಕ್ ರವರನ್ನು ಪ್ರಭಾರ ಪ್ರಾಂಶುಪಾಲರಾಗಿ ನಿಯೋಜನೆಗೊಂಡು, ಪ್ರವೇಶ ಪ್ರಕ್ರಿಯೆ ಆರಂಭಿಸಿದ್ದಾರೆ.

SDPI ಹರೇಕಳ ವತಿಯಿಂದ ಅಭಿನಂದನೆ

ಹರೇಕಳ ಗ್ರಾಮದ ನ್ಯೂಪಡ್ಪುವಿನ ಹಾಜಬ್ಬರ ಸರಕಾರಿ ಶಾಲೆಯು ಈ ಬಾರಿಯ  ಎಸೆಸೆಲ್ಸಿ ಪರೀಕ್ಷೆಯಲ್ಲಿ 100% ಫಲಿತಾಂಶದೊಂದಿಗೆ ವಿಶಿಷ್ಟ ಸಾಧನೆ ಮಾಡಿದ್ದು, ಪರೀಕ್ಷೆ ಬರೆದು, ತೇರ್ಗಡೆಗೊಂಡು ಶಾಲೆಗೆ ಕೀರ್ತಿ ತಂದ ಎಲ್ಲಾ ವಿದ್ಯಾರ್ಥಿಗಳಿಗೆ ಹಾಗು ಶಾಲಾ ಶಿಕ್ಷಕರ ವ್ರಂದಕ್ಕೆ SDPI ಹರೇಕಳ ಗ್ರಾಮ ಸಮಿತಿ ಮತ್ತು SDPI ನ್ಯೂಪಡ್ಪು ವಾರ್ಡ್ ಸಮಿತಿ ವತಿಯಿಂದ ಈ ಮೂಲಕ  ಅಭಿನಂದನೆ ಸಲ್ಲಿಸುತ್ತೇವೆ.

ಹರೇಕಳದ ಪ್ರತಿಷ್ಠಿತ ಶ್ರೀ ರಾಮಕೃಷ್ಣ ಪ್ರೌಢಶಾಲೆಯು ಶೇ 96% ಫಲಿತಾಂಶ ದಾಖಲಿಸಿಕೊಂಡು 5 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಗೊಂಡು ಊರಿಗೆ ಉತ್ತಮ ಹೆಸರನ್ನು ತಂದು ಕೊಟ್ಟಿದ್ದಾರೆ. ತೇರ್ಗಡೆ ಹೊಂದಿದ ಎಲ್ಲಾ ಮಕ್ಕಳಿಗೂ SDPI ಹರೇಕಳ ಸಮಿತಿ ವತಿಯಿಂದ ಅಭಿನಂದನೆ ಸಲ್ಲಿಸುತ್ತೇವೆ.

Join Whatsapp
Exit mobile version