ನವದೆಹಲಿ: ಎಲ್ಗಾರ್ ಪರಿಷದ್ ಪ್ರಕರಣದಲ್ಲಿ ಬಂಧಿತರಾಗಿದ್ದ ಹೋರಾಟಗಾರ ಗೌತಮ್ ನವ್ಲಾಖ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಕಳೆದ ನಾಲ್ಕು ವರ್ಷಗಳಿಂದ ಗೌತಮ್ ನವ್ಲಾಖ ಬಂಧನದಲ್ಲಿದ್ದರು. ನವ್ಲಾಖ ಅವರ ವಯಸ್ಸು ಹಾಗೂ ವಿಚಾರಣೆ ಸದ್ಯದಲ್ಲೇ ಮುಗಿಯುವ ಲಕ್ಷಣವಿಲ್ಲ ಎಂಬ ಅಂಶಗಳನ್ನು ಪರಿಗಣಿಸಿದ ಸುಪ್ರೀಂ ಕೋರ್ಟ್ ಅವರಿಗೆ ಜಾಮೀನು ಮಂಜೂರು ಮಾಡಿದೆ. ಈ ಪ್ರಕರಣದ ಸಹ ಆರೋಪಿಗಳಿಗೂ ಜಾಮೀನು ಮಂಜೂರು ಮಾಡಲಾಗಿದೆ ಎಂದೂ ಸುಪ್ರೀಂ ಕೋರ್ಟ್ ಹೇಳಿದೆ.
ಗೃಹ ಬಂಧನದಲ್ಲಿದ್ದಾಗ ನವ್ಲಾಖ, ತಾನು ಪಡೆದ ಭದ್ರತೆಗಾಗಿ ನವ್ಲಾಖ ರೂ. 20 ಲಕ್ಷವನ್ನು ಭದ್ರತಾ ವೆಚ್ಚವನ್ನಾಗಿ ಪಾವತಿಸಬೇಕು ಎಂದೂ ಸುಪ್ರೀಂ ಕೋರ್ಟ್ ಸೂಚಿಸಿದೆ.