ಕಲಬುರಗಿ: ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಕಿಂಗ್ ಪಿನ್ ದಿವ್ಯಾ ಹಾಗರಗಿ ಜಾಮೀನಿನ ಮೇಲೆ ಹೊರಬಂದಿದ್ದು, ಅದ್ಧೂರಿ ಸ್ವಾಗತ ಕೊರಲಾಗಿದೆ.
ಶುಕ್ರವಾರ ರಾತ್ರಿ ಜೈಲಿನಿಂದ ಬಿಡುಗಡೆಯಾಗಿರುವ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಪಿಎನ್‌ಟಿ ಕ್ರಾಸ್ ಬಳಿ ಇರುವ ಮನೆಗೆ ಆಗಮಿಸಿದ್ದಾರೆ. ದಿವ್ಯಾ ಹಾಗರಗಿ ಮನೆ ಮುಂದೆ ಬರುತ್ತಿದ್ದಂತೆ ಆಕಾಶದೆತ್ತರಕ್ಕೆ ಹಾರುವ ಪಟಾಕಿ ಸಿಡಿಸಿ ಸಂಭ್ರಮಿಸಿದಲ್ಲದೆ, ಹಾರ ತೂರಾಯಿ ಹಾಕಿ ಅದ್ದೂರಿಯಾಗಿ ಸ್ವಾಗತ ಕೋರಲಾಗಿದೆ.
ದಿವ್ಯಾ ಹಾಗರಗಿ ಜೈಲಿನಿಂದ ಬಿಡುಗಡೆಯಾದ ಬಳಿಕ ಜೈಲಿನ ಬಳಿಯೇ ಕೆಲ ಬಿಜೆಪಿಯ ಉಚ್ಚಾಟಿತ ನಾಯಕರು ಸ್ವಾಗತ ಕೋರಿದರು. ಬಳಿಕ ಮನೆ ಹತ್ತಿರ ದಿವ್ಯಾ ಹಾಗರಗಿ ಪತಿ ರಾಜೇಶ್ ಹಾಗರಗಿ ಮತ್ತು ಅಭಿಮಾನಿಗಳು ಅದ್ದೂರಿ ಸ್ವಾಗತ ಕೊರಿದರು.
ಪಿಎಸ್ಐ ನೇಮಕಾತಿ ಅಕ್ರಮದಲ್ಲಿ 9 ತಿಂಗಳಿನಿಂದ ಜೈಲಿನಲ್ಲಿದ್ದ ದಿವ್ಯಾ ಹಾಗರಿಗಿಗೆ ಜನವರಿ 5 ರಂದು ಕಲಬುರಗಿ ಜಿಲ್ಲಾ ಸತ್ರ ನ್ಯಾಯಾಲಯ ಜಾಮೀನು ನೀಡಿತ್ತು. ದಿವ್ಯಾ ಹಾಗರಗಿ ಸೇರಿ 27 ಜನರಿಗೆ ನ್ಯಾಯಾಲಯ ಶರತ್ತುಬದ್ದ ಜಾಮೀನು ನೀಡಿದೆ.