Home ಟಾಪ್ ಸುದ್ದಿಗಳು PSI ನೇಮಕಾತಿ ಅಕ್ರಮ ಪ್ರಕರಣ: ಬ್ಲೂಟೂತ್ ಡಿವೈಸ್ ಮುಚ್ಚಿಟ್ಟಿದ್ದು ಹೂವು ಕುಂಡದಲ್ಲಿ

PSI ನೇಮಕಾತಿ ಅಕ್ರಮ ಪ್ರಕರಣ: ಬ್ಲೂಟೂತ್ ಡಿವೈಸ್ ಮುಚ್ಚಿಟ್ಟಿದ್ದು ಹೂವು ಕುಂಡದಲ್ಲಿ


ಕಲಬುರಗಿ: ಪಿಎಸ್ಐ ಪರೀಕ್ಷೆಯಲ್ಲಿ ಅಕ್ರಮ ಎಸಗಿದ ಪ್ರಭು ಪರೀಕ್ಷೆಯ ಮುನ್ನಾ ದಿನ ಪರೀಕ್ಷಾ ಕೇಂದ್ರದ ಆವರಣದ ಹೂವಿನ ಪಾಟ್‌ನಲ್ಲಿ ಡಿವೈಸ್ ಮುಚ್ಚಿಟ್ಟಿದ್ದ ಎಂಬ ಅಂಶ ತನಿಖೆ ವೇಳೆ ಬೆಳಕಿಗೆ ಬಂದಿದೆ.

ಪಿಎಸ್‌ಐ ಹುದ್ದೆಗಳ ನೇಮಕಾತಿ ಪರೀಕ್ಷಾ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾದ ಅಭ್ಯರ್ಥಿ ಪ್ರಭುನನ್ನು ಎಮ್‌ ಎಸ್‌ ಐ ಡಿಗ್ರಿ ಕಾಲೇಜಿಗೆ ಕರೆತಂದು ಸ್ಥಳ ಮಹಜರ್ ಮಾಡಲಾಗಿದೆ. ಪ್ರಭು ಬ್ಲೂಟೂತ್ ಡಿವೈಸ್ ಸಹಾಯದಿಂದ ಪಿಎಸ್ ಐ ಪರೀಕ್ಷೆ ಬರೆದು ಸ್ಥಾನ ಗಿಟ್ಟಿಸಿಕೊಂಡಿದ್ದಾನೆ ಎಂಬ ಆರೋಪದ ಹಿನ್ನೆಲೆ ಸೋಮವಾರ ಆತನನ್ನು ಬಂಧಿಸಲಾಗಿದೆ.

Join Whatsapp
Exit mobile version