Home ಟಾಪ್ ಸುದ್ದಿಗಳು ಕೇಂದ್ರದ ವಿರುದ್ಧ ದೆಹಲಿಯ ಜಂತರ್ ಮಂತರ್ ನಲ್ಲಿ ಆಕ್ರೋಶಿತ ರೈತರಿಂದ ಪ್ರತಿಭಟನೆ

ಕೇಂದ್ರದ ವಿರುದ್ಧ ದೆಹಲಿಯ ಜಂತರ್ ಮಂತರ್ ನಲ್ಲಿ ಆಕ್ರೋಶಿತ ರೈತರಿಂದ ಪ್ರತಿಭಟನೆ

ನವದೆಹಲಿ, ಜುಲೈ 22: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ಕಳೆದ ನವೆಂಬರ್‌ನಿಂದ ಪ್ರತಿಭಟನೆ ನಡೆಸುತ್ತಿರುವ ರೈತರು ಇಂದು ನವದೆಹಲಿಯ ಜಂತರ್ ಮಂತರ್‌ನಲ್ಲಿ ಮತ್ತೆ ಸಭೆ ಸೇರಿ ಕೇಂದ್ರದ ವಿರುದ್ಧ ಪ್ರತಿಭಟನೆ ನಡೆಸಿದರು.

ಸಂಸತ್ತು ಅಧಿವೇಶನದಲ್ಲಿದ್ದಾಗ ಕಿಸಾನ್ ಸಂಸದ್ ಸೇರಿದಂತೆ ಹಲವು ರೈತಪರ ಸಂಘಟನೆಗೆ ಸೇರಿದ 200 ಜನರ ಗುಂಪು ಆಂದೋಲನ ನಡೆಸಿದರು. ಪ್ರತಿಭಟನಕಾರರು ವಿವಿಧ ಕಡೆಗಳಿಂದ ಬಸ್ಸುಗಳ ಮೂಲಕ ಜಂತರ್ ಮಂತರ್ ತಲುಪಿದರು. ಕಿಸಾನ್ ಸಂಸದ್ ನೇತೃತ್ವದಲ್ಲಿ ಜುಲೈ 22 ರಿಂದ ಅಗಸ್ಟ್ 9 ರ ವರೆಗೆ ಬೆಳಗ್ಗೆ 11 ರಿಂದ ಸಂಜೆ 5 ರ ವರೆಗೆ ಕೋವಿಡ್ ಮಾರ್ಗಸೂಚಿಯನ್ನು ಪಾಲಿಸಿಕೊಂಡು ಪ್ರತಿಭಟನೆ ನಡೆಸಲು ದೆಹಲಿ ಸರ್ಕಾರ ಮತ್ತು ಪೊಲೀಸರು ರೈತರಿಗೆ ಅವಕಾಶ ನೀಡಿದ್ದಾರೆ.

ಮಾತ್ರವಲ್ಲದೇ ದೆಹಲಿ ನೆರೆದ ರೈತರು ಜಿಟಿ ಕರ್ನಲ್ ರಸ್ತೆ ಮೂಲಕ ಚಿಂಗು ಮಾರ್ಗವಾಗಿ ಜಂತರ್ ಮಂತರ್ ತಲುಪುವ ಯೋಜನೆ ಹಾಕಿದ್ದ ರೈತರನ್ನು ದಾರಿ ಮಧ್ಯೆ ತಡೆದ ಪೊಲೀಸರು ಪರ್ಯಾಯ ಮಾರ್ಗವನ್ನು ಕಂಡುಕೊಳ್ಳುವಂತೆ ಪ್ರತಿಭಟನಕಾರಿಗೆ ಪೊಲೀಸರು ಸೂಚಿಸಿದರು. ಆರಂಭಿಕ ಸಂಘರ್ಷದ ಹಿನ್ನೆಲೆಯಲ್ಲಿ ಪ್ರತಿದಿನ ಕೇವಲ 200 ಮಂದಿಗೆ ಸೀಮಿತ ಜನರಿಂದ ಪ್ರತಿಭಟನೆ ನಡೆಸುವಂತೆ ಮನವಿ ಮಾಡಿದರು.

ಕೇಂದ್ರ ಜಾರಿಗೆ ತಂದ ಕೃಷಿ ಕಾನೂನುಗಳ ವಿರುದ್ಧ ಸಂಸತ್ ಭವನದ ಸಂಕೀರ್ಣದ ಬಳಿಯಿರುವ ಗಾಂಧಿ ಪ್ರತಿಮೆ ಬಳಿ ರಾಹುಲ್ ಗಾಂಧಿ ಮತ್ತು ಇತರ ಕಾಂಗ್ರೆಸ್ ಸಂಸದರು ಪ್ರತಿಭಟನೆ ನಡೆಸಿದರು. ಶಿರೋಮಣಿ ಅಕಾಲಿ ದಳವು ರಾಜ್ಯಸಭೆಯಲ್ಲಿ ಈ ವಿಷಯದ ಬಗ್ಗೆ ಚರ್ಚೆಗೆ ಒತ್ತಾಯಿಸಿದೆ.

ಹೊಸ ಕೃಷಿ ಕಾನೂನುಗಳು ರೈತರಿಗೆ ಪ್ರಯೋಜನಕಾರಿ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ರವರು ಕೇಂದ್ರದ ನೂತನ ಕಾಯ್ದೆಯನ್ನು ಸಮರ್ಥಿಸಿದರು. ಕೃಷಿ ಕಾನೂನಿನಲ್ಲಿರುವ ನ್ಯೂನ್ಯತೆಯ ಕುರಿತು ಸರ್ಕಾರದ ಗಮನಕ್ಕೆ ತಂದರೆ ಅದರ ಕುರಿತು ಚರ್ಚೆ ನಡೆಸಲಾಗುವುದೆಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.

Join Whatsapp
Exit mobile version