Home ಕರಾವಳಿ ಮಂಗಳೂರು : ಎಂಜಿನ್ ಸಮಸ್ಯೆಯಿಂದ ಸಮುದ್ರದಲ್ಲಿ ಸಿಲುಕಿದ ಬೋಟ್ | ಮೂವರು ಮೀನುಗಾರರ ರಕ್ಷಣೆ

ಮಂಗಳೂರು : ಎಂಜಿನ್ ಸಮಸ್ಯೆಯಿಂದ ಸಮುದ್ರದಲ್ಲಿ ಸಿಲುಕಿದ ಬೋಟ್ | ಮೂವರು ಮೀನುಗಾರರ ರಕ್ಷಣೆ

ಮಂಗಳೂರು :  ಸಮುದ್ರದಲ್ಲಿ ಬೋಟ್ ವೊಂದು ಕೆಟ್ಟು ನಿಂತಿದ್ದ ಪರಿಣಾಮ ಅದರಲ್ಲಿದ್ದ ಮೂವರು ಮೀನುಗಾರರನ್ನು ಕರಾವಳಿ ಕಾವಲು ಪಡೆ ರಕ್ಷಣೆ ಮಾಡಿದೆ.

ಕಣ್ಣೂರಿನಿಂದ 10 ನಾಟಿಕಲ್‌ ಮೈಲಿ ದೂರದಲ್ಲಿ ಎಂಜಿನ್‌ ಸಮಸ್ಯೆಯಿಂದ ಕೆಟ್ಟು ನಿಂತಿದ್ದ ಬೋಟ್ ನ ಬಗ್ಗೆ ಮಾಹಿತಿ ಪಡೆದ ಕರಾವಳಿ ಕಾವಲು ಪಡೆ ಸಿಬ್ಬಂದಿಗಳು ವಿಕ್ರಮ್‌ ಹಡಗಿನಲ್ಲಿ ಕಾರ್ಯಾಚರಣೆ ನಡೆಸಿ, ಮೂವರನ್ನು ರಕ್ಷಿಸಿದ್ದಾರೆ. ರಕ್ಷಿಸಿದ ಮೀನುಗಾರರಿಗೆ ಆಹಾರ, ವೈದ್ಯಕೀಯ ನೆರವು ನೀಡಲಾಗಿದೆ.

ತೌಕ್ತೆ ಚಂಡಮಾರುತದಿಂದ ಕರಾವಳಿಯಲ್ಲಿ ಶುಕ್ರವಾರ ರಾತ್ರಿಯಿಂದಲೇ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಜನತೆ ಕಂಗಾಲಾಗಿದ್ದಾರೆ.

ವೀಕೆಂಡ್ ಕರ್ಪ್ಯೂ ತೆರವುಗೊಳಿಸಿದ್ದರಿಂದ ಕಾರ್ಮಿಕರು ನಿರ್ಮಾಣ ಕಾಮಗಾರಿ ಸೇರಿದಂತೆ ವಿವಿಧ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಸಿದ್ಧರಾಗಿದ್ದರೂ ಮಳೆಯಿಂದಾಗಿ ಹೊರಗೆ ಹೋಗದಂತಾಗಿದೆ. 

Join Whatsapp
Exit mobile version