Home Uncategorized ಆಂಧ್ರ ಮುಖ್ಯಮಂತ್ರಿ ವಿರುದ್ದ ಬಂಡಾಯ – ದೇಶದ್ರೋಹ ಪ್ರಕರಣದಡಿ ಸಂಸದ ಅರೆಸ್ಟ್‌

ಆಂಧ್ರ ಮುಖ್ಯಮಂತ್ರಿ ವಿರುದ್ದ ಬಂಡಾಯ – ದೇಶದ್ರೋಹ ಪ್ರಕರಣದಡಿ ಸಂಸದ ಅರೆಸ್ಟ್‌

ಆಂಧ್ರಪ್ರದೇಶ ಸಿಎಂ ಜಗನ್‌ಮೋಹನ್‌ ರೆಡ್ಡಿ ಅವರ ಜಾಮೀನು ರದ್ದುಪಡಿಸಬೇಕು ಎಂದು ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಮನವಿ ಮಾಡಿದ್ದ ವೈಎಸ್‌ಆರ್‌‌‌ ಕಾಂಗ್ರೆಸ್‌ ಪಕ್ಷದ ಸಂಸದ ಕನುಮುರು ರಘುರಾಮ ರಾಜು ಅವರನ್ನು ಆಂಧ್ರ ಪ್ರದೇಶ ಸಿಐಡಿ ಪೊಲೀಸರು ಬಂಧಿಸಿದ್ದಾರೆ.


ರಘರಾಮ ಕೃಷ್ಣಂ ರಾಜು ಅವರ ವಿರುದ್ದ ಪೊಲೀಸರು ದೇಶದ್ರೋಹ ಪ್ರಕರಣ ದಾಖಲಿಸಿದ್ದು ಅವರನ್ನು ಬಂಧಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
“ಆಂಧ್ರ ಸಿಎಂ ಜಗನ್‌ಮೋಹನ್‌ ರೆಡ್ಡಿ ಅವರು ಜಾಮೀನು ನಿಯಮ ಉಲ್ಲಂಘನೆ ಮಾಡುತ್ತಿದ್ದಾರೆ. ಹಾಗಾಗಿ ಅವರ ಜಾಮೀನನ್ನು ಶೀಘ್ರವೇ ರದ್ದು ಮಾಡಬೇಕು” ಎಂದು ಸಿಬಿಐ ನ್ಯಾಯಾಲಯವನ್ನು ಕೋರಿದ್ದರು. ಇದರ ಬೆನ್ನಲ್ಲೇ ರಘರಾಮ ಕೃಷ್ಣಂ ರಾಜು ಅವರನ್ನು ಆಂಧ್ರದ ಸಿಐಡಿ ಪೊಲೀಸರು ಬಂಧಿಸಿದ್ದಾರೆ.


ಕೆಲ ಸಮುದಾಯಗಳ ವಿರುದ್ದ ರಘುರಾಮ ಅವರು ದ್ವೇಷದ ಭಾಷಣ ಮಾಡಿದ್ದು ಹಾಗೂ ಆಡಳಿತ ಸರ್ಕಾರದ ವಿರುದ್ದ ಜನರಲ್ಲಿ ಅಸಮಾಧಾನ ಸೃಷ್ಟಿಸುವಂತಹ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿ ಆಂಧ್ರದ ಸಿಐಡಿ ಪೊಲೀಸರು ಬಂಧಿಸಿದ್ದಾರೆ.

Join Whatsapp
Exit mobile version