ಮಂಗಳೂರು: ಕಾವೂರಿನಲ್ಲಿ ಬಾಡಿಗೆ ಮನೆಯಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಕೃಷ್ಣಾಪುರ ನಿವಾಸಿ ರಮ್ಲತ್ (46) ಮತ್ತು ಉಡುಪಿಯ ಉಳಿಯಾರಗೋಳಿ ನಿವಾಸಿ ಅಬ್ದುಲ್ ಹಫೀಜ್ (55) ಎಂದು ಗುರುತಿಸಲಾಗಿದೆ.
ಆರೋಪಿಗಳಿಂದ 10,060 ರೂಪಾಯಿ ನಗದು, 3 ಮೊಬೈಲ್ ಫೋನ್, ಕಾರು ಸೇರಿದಂತೆ 3,25,560 ರೂಪಾಯಿ ಮೌಲ್ಯದ ವಸ್ತುಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.