Home ಟಾಪ್ ಸುದ್ದಿಗಳು ಕಾಂಗ್ರೆಸ್ ಅಕ್ಕಿ, ಕುರಿ, ಕೋಳಿ ಕೊಟ್ಟು ದಲಿತರನ್ನು ಗುಲಾಮರನ್ನಾಗಿಸಿದೆ: ಕಾರಜೋಳ

ಕಾಂಗ್ರೆಸ್ ಅಕ್ಕಿ, ಕುರಿ, ಕೋಳಿ ಕೊಟ್ಟು ದಲಿತರನ್ನು ಗುಲಾಮರನ್ನಾಗಿಸಿದೆ: ಕಾರಜೋಳ

ಬೆಂಗಳೂರು: ಅಕ್ಕಿ, ಕುರಿ, ಕೋಳಿ ಕೊಟ್ಟು ಕಾಂಗ್ರೆಸ್ ದಲಿತರನ್ನು ಗುಲಾಮರನ್ನಾಗಿಸಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.
ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯ ಬಂದಾಗಿನಿಂದ ದಲಿತರನ್ನು ಗುಲಾಮರಂತೆ ನಡೆಸಿಕೊಂಡು ಬಂದಿದ್ದು, ದಲಿತರಿಗೆ ಅಕ್ಕಿ, ಕುರಿ, ಕೋಳಿ ಕೊಟ್ಟು ಸ್ವಾಭಿಮಾನ ಮತ್ತು ಸ್ವತಂತ್ರ ಬದುಕು ಕಟ್ಟಿಕೊಳ್ಳಲು ಅವಕಾಶ ನೀಡಲೇ ಇಲ್ಲ ಎಂದು ಅವರು ಹೇಳಿದರು.

ದಲಿತರು ಹೊಟ್ಟೆಪಾಡಿಗೆ ಬಿಜೆಪಿಗೆ ಹೋಗಿದ್ದಾರೆ ಎಂದು ಹೇಳಿದ ಸಿದ್ದರಾಮಯ್ಯ ಅವರ ಮನಸ್ಥಿತಿಯೂ ದಲಿತರನ್ನು ಗುಲಾಮರನ್ನಾಗಿ ಇಡುವಂತಹದ್ದೇ. ಇದು ದಲಿತರಿಗೆ ಅವರು ಮಾಡಿರುವ ಅಪಮಾನ ಎಂದು ಅವರು ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಏರ್ಪಡಿಸಿದ ರಾಷ್ಟ್ರೀಯ ಸಂವಿಧಾನ ದಿನದ ಕಾರ್ಯಕ್ರಮದಲ್ಲಿ ಕಿಡಿಕಾರಿದರು.

ದಲಿತರು ಸದಾ ಕಾಲ ಇವರ ಗುಲಾಮರಾಗಿಯೇ ಇರಬೇಕಾ ? ಅಕ್ಕಿ, ಎಣ್ಣೆ, ಕುರಿ–ಕೋಳಿ ಕೊಟ್ಟು ಸದಾ ಕಾಲ ಮೋಸ ಮಾಡಲು ಆಗುವುದಿಲ್ಲ. ದಲಿತರು ಈಗ ಸುಶಿಕ್ಷಿತರಾಗುತ್ತಿದ್ದಾರೆ. ದಲಿತರು ಕಾಂಗ್ರೆಸ್ನ ವೋಟ್ ಬ್ಯಾಂಕ್ ಎಂಬ ಕಾಲ ಹೋಗಿದೆ. ಬಿಜೆಪಿಯತ್ತ ಬರುತ್ತಿದ್ದಾರೆ. ದಲಿತರನ್ನು ಸದಾ ಮೋಸ ಮಾಡಲು ಸಾಧ್ಯವಿಲ್ಲ ಎಂದರು.

Join Whatsapp
Exit mobile version