ಸುಳ್ಯ: ಪ್ರವಾದಿ ನಿಂದನೆ ಮಾಡಿರುವ ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳದ ಪೋಲಿಸರ ನಡೆಯನ್ನು ಖಂಡಿಸಿ ಮುಂದಿನ ಹೋರಾಟದ ಬಗ್ಗೆ ತೀರ್ಮಾನಿಸಲು ಸುಳ್ಯದ ಸರ್ವ ಮುಸ್ಲಿಂ ಸಂಘಟನೆ ಮತ್ತು ಪಕ್ಷಗಳ ನೇತಾರರು ಅನ್ಸಾರಿಯ ಯತೀಂಖಾನದಲ್ಲಿ ಮಹತ್ವದ ಸಭೆ ನಡೆಸಿದರು.
ಸಭೆಯಲ್ಲಿ ತಾಲೂಕಿನ ಎಲ್ಲಾ ಮುಸ್ಲಿಮ್ ಸಂಘಟನೆಗಳ ಪ್ರತಿನಿಧಿಗಳು, ಮುಖಂಡರು ಪಾಲ್ಗೊಂಡು, ಪ್ರವಾದಿ ನಿಂದನೆ ಮಾಡಿರುವ ಆರೋಪಿಯ ಕೃತ್ಯವನ್ನು ಖಂಡಿಸಿದರು. ಅದೇ ರೀತಿ ಈ ಪ್ರಕರಣದಲ್ಲಿ ಪೊಲೀಸರ ತಾರತಮ್ಯ ನೀತಿ, ಆರೋಪಿ ವಿರುದ್ಧ ಕಠಿಣ ಸೆಕ್ಷನ್ ದಾಖಲಿಸದ ಮತ್ತು ಬಂಧಿಸದ ಪೋಲಿಸರ ನಡೆಯನ್ನು ಖಂಡಿಸಿದರು.
ಈ ದುಷ್ಕೃತ್ಯದ ವಿರುದ್ಧ ಹೋರಾಟ ನಡೆಸುವ ಸಲುವಾಗಿ ಸರ್ವ ಮುಸ್ಲಿಂ ಸಂಘಟನೆ ನೇತಾರರನ್ನು ಒಳಗೊಂಡ ಕಾರ್ಯಕಾರಿ ಸಮಿತಿ ರಚಿಸಲು ಸುಳ್ಯ ಮುಸ್ಲಿಂ ಒಕ್ಕೂಟ ತೀರ್ಮಾನಿಸಿತು.