ಢಾಕಾ: ಭಾರತದಲ್ಲಾಗುತ್ತಿರುವ ಪ್ರವಾದಿ ಮುಹಮ್ಮದರ ನಿಂದನೆಯ ವಿವಾದಕ್ಕೆ ನಾವು ಮೂಗು ತೂರಿಸುವುದಿಲ್ಲ ಎಂದು ಬಾಂಗ್ಲಾದೇಶದ ಮಾಹಿತಿ ಮತ್ತು ಪ್ರಸಾರ ಸಚಿವ ಡಾ.ಹಸನ್ ಮಹಮೂದ್ ಹೇಳಿದ್ದಾರೆ.
ಪ್ರವಾದಿ ನಿಂದನೆಯ ಸಮಸ್ಯೆ ಭಾರತದ ಆಂತರಿಕ ಸಮಸ್ಯೆ. ಇದು ಬಾಂಗ್ಲಾದೇಶಕ್ಕೆ ಸಂಬಂಧಿಸಿದ್ದಲ್ಲ. ಆರೋಪಿಗಳ ವಿರುದ್ಧ ಭಾರತ ಸರಕಾರ ಕ್ರಮ ಕೈಗೊಳ್ಳುತ್ತಿದೆ. ಇನ್ನು ಮುಂದಿನ ದಿನಗಳಲ್ಲಿ ಅವರ ವಿರುದ್ಧ ಕಟ್ಟು ನಿಟ್ಟಾದ ಕ್ರಮವನ್ನು ಕೈಗೊಳ್ಳಬಹುದು ಎಂದು ಭಾರತೀಯ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದ್ದಾರೆ.
ಪ್ರವಾದಿಯವರಿಗೆ ಅವಮಾನ ಮಾಡುವುದನ್ನು ನಾವು ಬಲವಾಗಿ ಖಂಡಿಸುತ್ತೇವೆ. ಆದರೆ ಭಾರತ ಸರ್ಕಾರವು ಈ ಬಗ್ಗೆ ಕ್ರಮ ಕೈಗೊಂಡಿದೆ. ಅದಕ್ಕಾಗಿ ನಾವು ಭಾರತ ಸರ್ಕಾರವನ್ನು ಅಭಿನಂದಿಸುತ್ತೇವೆ ಎಂದಿದ್ದಾರೆ.