Home ಟಾಪ್ ಸುದ್ದಿಗಳು ಯೋಗಿ ಸರಕಾರ ಮುಸ್ಲಿಮರನ್ನು ಗುರಿಪಡಿಸಿ ನಡೆಸುತ್ತಿರುವ ಬುಲ್ಡೋಜರ್ ಧ್ವಂಸವನ್ನು ಶಕ್ತವಾಗಿ ಖಂಡಿಸಿದ ಮಾಯಾವತಿ

ಯೋಗಿ ಸರಕಾರ ಮುಸ್ಲಿಮರನ್ನು ಗುರಿಪಡಿಸಿ ನಡೆಸುತ್ತಿರುವ ಬುಲ್ಡೋಜರ್ ಧ್ವಂಸವನ್ನು ಶಕ್ತವಾಗಿ ಖಂಡಿಸಿದ ಮಾಯಾವತಿ

ಲಕ್ನೋ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರಕಾರ ಮುಸ್ಲಿಮರನ್ನು ಗುರಿಪಡಿಸಿಕೊಂಡು ಅವರ ನಿವಾಸಗಳನ್ನು ಬುಲ್ಡೋಝರ್ ಮೂಲಕ ಧ್ವಂಸಗೊಳಿಸುತ್ತಿರುವುದು ಖಂಡನಾರ್ಹ ಎಂದು ಬಿ ಎಸ್ ಪಿ ನಾಯಕಿ ಮಾಯಾವತಿ ಯೋಗಿ ಹಿಂಸೆಯ ವಿರುದ್ಧ ಕಿಡಿಕಾರಿದ್ದಾರೆ.

ಇಂತಹ ದುಷ್ಕೃತ್ಯಗಳನ್ನು ಮಾಡುವ ಮೂಲಕ ಅಲ್ಪಸಂಖ್ಯಾತ ಮುಸ್ಲಿಮರಲ್ಲಿ ಭಯದ ವಾತಾವರಣ ಸೃಷ್ಟಿಸುತ್ತಿದ್ದಾರೆ. ಅನ್ಯಾಯದ ವಿರುದ್ಧ ಎತ್ತುತ್ತಿರುವ ಧ್ವನಿಗಳನ್ನು ಮೊಟಕುಗೊಳಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

Join Whatsapp
Exit mobile version