Home ಟಾಪ್ ಸುದ್ದಿಗಳು ಲಕ್ಷದ್ವೀಪಕ್ಕೆ ಕಾಂಗ್ರೆಸ್ ಸಂಸದರಿಗೆ ಪ್ರವೇಶ ನಿಷೇಧ !

ಲಕ್ಷದ್ವೀಪಕ್ಕೆ ಕಾಂಗ್ರೆಸ್ ಸಂಸದರಿಗೆ ಪ್ರವೇಶ ನಿಷೇಧ !

ಕಳೆದ ತಿಂಗಳು ಲಕ್ಷದ್ವೀಪ ಆಡಳಿತಾಧಿಕಾರಿ ಪ್ರಫುಲ್ ಖೋಡಾ ಪಟೇಲ್ ಜಾರಿಗೆ ತಂದಿದ್ದ ಜನವಿರೋಧಿ ಕಾನೂನುಗಳ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಇದೀಗ ಲಕ್ಷದ್ವೀಪ ದಲ್ಲಿ ಕಾಂಗ್ರೆಸ್ ಸಂಸದರಿಗೆ ಸ್ಥಳೀಯ ಆಡಳಿತ ಪ್ರವೇಶವನ್ನು ನಿರಾಕರಣೆ ಮಾಡಿದೆ.

ಕೇಂದ್ರಾಡಳಿತ ಪ್ರದೇಶಕ್ಕೆ ಕಾಂಗ್ರೆಸ್ ಸಂಸದರು ಭೇಟಿ ನೀಡಿದರೆ ಶಾಂತಿಯುತ ವಾತಾವರಣ ಹಾಳಾಗಲಿದೆ ಎಂಬ ಕಾರಣ ನೀಡಿ ಲಕ್ಷದ್ವೀಪ ಆಡಳಿತ ಕಾಂಗ್ರೆಸ್ ಸಂಸದರಾದ ಹಿಬಿ ಈಡನ್ ಹಾಗೂ ಟಿ.ಎನ್.ಪ್ರತಾಪನ್ ಅವರ ಭೇಟಿ ಅರ್ಜಿಯನ್ನು ತಿರಸ್ಕರಿಸಿದೆ.

ಸಂಸದರ ಭೇಟಿ ಉದ್ದೇಶಪೂರ್ವಕವಾಗಿ ಶಾಂತಿಯನ್ನು ಕದಡುವ ಪ್ರಯತ್ನವಾಗಿದ್ದು, ಕೋವಿಡ್-19 ಪ್ರಕರಣಗಳು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಆಡಳಿತ ಸಮರ್ಥನೆ ನೀಡಿದೆ.ಸಂಸದರ ಭೇಟಿಯ ಉದ್ದೇಶ, ದ್ವೀಪ ಜನರಿಗೆ ಹೊಸ ಆಡಳಿತದಿಂದ ಜನರ ಸಮಸ್ಯೆಗೆ ಆಲಿಸುವುದಕ್ಕಾಗಿಯಾಗಿದ್ದು, ಇದು ರಾಜಕೀಯ ಕ್ರಮ ಎಂದೆನಿಸುತ್ತಿದೆ ಎಂದು ಜಿಲ್ಲಾಡಳಿತ ಹೇಳಿದೆ.

Join Whatsapp
Exit mobile version