Home ಕರಾವಳಿ ದಕ್ಷಿಣ ಕನ್ನಡ: ಹನಿಟ್ರ್ಯಾಪ್ ಗೆ ಸಿಕ್ಕಿ 30 ಲಕ್ಷ ಖೋತಾ | ಯುವತಿ ಅರೆಸ್ಟ್

ದಕ್ಷಿಣ ಕನ್ನಡ: ಹನಿಟ್ರ್ಯಾಪ್ ಗೆ ಸಿಕ್ಕಿ 30 ಲಕ್ಷ ಖೋತಾ | ಯುವತಿ ಅರೆಸ್ಟ್

ಪುತ್ತೂರು: ಯುವಕನೋರ್ವನಿಗೆ ಹನಿಟ್ರ್ಯಾಪ್‌ ಬಲೆಗೆ ಹಾಕಿ ಬರೋಬ್ಬರಿ 30 ಲಕ್ಷ ರೂ‌‌. ಪೀಕಿದ ಆರೋಪ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಯುವತಿವೋರ್ವಳನ್ನು ಪೊಲೀಸರು ಬಂಧಿಸಿರುವ ಘಟನೆ ವರದಿಯಾಗಿದೆ.

ನೆಟ್ಟಣಿಗೆ ಮುಡ್ನೂರು ಗ್ರಾಮದ ಚೀಚಗದ್ದೆ ನಿವಾಸಿ ಸೇಲ್ಸ್‌ಮ್ಯಾನ್ ಆಗಿರುವ ಅಬ್ದುಲ್ ನಾಸೀರ್ (25)ಎಂಬವರು ಹನಿಟ್ರ್ಯಾಪ್‌ಗೆ ಬಲಿಯಾಗಿ 30 ಲಕ್ಷ ರೂ. ಕಳೆದುಕೊಂಡಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸ್ ಮೇಲಧಿಕಾರಿಗಳ ಸೂಚನೆಯಂತೆ ಅವರು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಏ.12 ರಂದು ಘಟನೆ ನಡೆದಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

ನೆಟ್ಟಣಿಗೆ ಮುಡ್ನೂರು ಚೀಚಗದ್ದೆಯ ಹನೀಫ್ ಯಾನೆ ಕೆಎಂವೈ ಹನೀಫ್, ಕೊಟ್ಯಾಡಿಯ ಮಹಮ್ಮದ್ ಕುಂಞಿ, ಕೊಟ್ಯಾಡಿಯ ಶಾಫಿ, ಸವಣೂರಿನ ಅಝರ್, ಸಯೀದ್‌ ಮೋನು, ನಾಸಿರ್ ಮತ್ತು ಕಾರ್ಕಳದವಳೆಂದು ಪರಿಚಯಿಸಿಕೊಂಡಿದ್ದ ತನೀಶಾ ಎಂಬವರ ವಿರುದ್ಧ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ತನಿಖೆ ಕೈಗೆತ್ತಿಗೊಂಡ ಉಪವಿಭಾಗದ ಡಿವೈಎಸ್ಪಿ ಡಾ.ಗಾನ ಪಿ. ಕುಮಾರ್ ನೇತೃತ್ವದ ಪೊಲೀಸರು ಪ್ರಕರಣದ ಆರೋಪಿಗಳ ಪೈಕಿ ತನೀಶಾ ಎಂಬಾಕೆಯನ್ನು ಬಂಧಿಸಿದ್ದಾರೆ. ಉಳಿದ ಆರು ಮಂದಿ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಪೊಲೀಸರು ಉಳಿದವರ ಬಂಧನಕ್ಕೆ ಬಲೆ ಬೀಸಿದ್ದಾರೆ.

Join Whatsapp
Exit mobile version