Home ಟಾಪ್ ಸುದ್ದಿಗಳು ನಿಷೇಧಿತ ಆಕ್ಸಿಟೋಸಿನ್ ಬಳಕೆ: ಐವರು ಡೈರಿ ಮಾಲೀಕರ ವಿರುದ್ಧ ಪ್ರಕರಣ ದಾಖಲು

ನಿಷೇಧಿತ ಆಕ್ಸಿಟೋಸಿನ್ ಬಳಕೆ: ಐವರು ಡೈರಿ ಮಾಲೀಕರ ವಿರುದ್ಧ ಪ್ರಕರಣ ದಾಖಲು

ಅಹ್ಮದಾಬಾದ್: ಎಮ್ಮೆಗಳ ಹಾಲು ಉತ್ಪಾದಿಸುವ ಸಾಮರ್ಥ್ಯವನ್ನು ಹೆಚ್ಚಿಸಲು ನಿಷೇಧಿತ ಆಕ್ಸಿಟೋಸಿನ್ ಇಂಜೆಕ್ಷನ್ ಬಳಸಿದ ಆರೋಪದ ಮೇಲೆ ಬನಸ್ಕಾಂತದ ಪಾಲನ್ ಪುರದ ಐವರು ಡೈರಿ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಆಕ್ಸಿಟೋಸಿನ್ ಒಂದು ವಿಧದ ಔಷಧವಾಗಿದ್ದು, ಹಾಲಿನ ಉತ್ಪಾದನೆಯನ್ನು ಹೆಚ್ಚಿಸಲು ಬಳಸುತ್ತಾರೆ. ಇದರ ದುರುಪಯೋಗವನ್ನು ತಪ್ಪಿಸಲು 2018 ರಿಂದ ಕೇಂದ್ರ ಸರ್ಕಾರವು ಮಾರಾಟವನ್ನು ನಿಷೇಧಿಸಿತ್ತು.

ಪಾಲನ್ ಪುರದ ಕೆಲವು ಡೈರಿ ಫಾರ್ಮ್ ಗಳಿಗೆ ಇಬ್ಬರು ಪ್ರವಾಸಿಗರ ಭೇಟಿಯ ಸಂದರ್ಭದಲ್ಲಿ ಈ ದಂಧೆಯು ಬೆಳಕಿಗೆ ಬಂದಿದೆ ಎಂದು ಪೋಲಿಸರು ತಿಳಿಸಿದ್ದಾರೆ.

Join Whatsapp
Exit mobile version