ಮಲ್ಪೆ: ಮಲ್ಪೆ ಬೀಚ್‌ನಲ್ಲಿ ಪ್ರವಾಸಿಗರ ಆಕರ್ಷಣೆಗೆ ರಾಜ್ಯದಲ್ಲೇ ಪ್ರಪ್ರಥಮ ಬಾರಿಗೆ ತೇಲುವ ಸೇತುವೆ(ಫ್ಲೋಟಿಂಗ್ ಬ್ರಿಡ್ಜ್) ಅಳವಡಿಸಲಾಗಿತ್ತು. ಎರಡೇ ದಿನಕ್ಕೆ ತೇಲುವ ಸೇತುವೆ ಚೆಲ್ಲಾಪಿಲ್ಲಿಯಾಗಿದೆ. ಮುರಿದು ಹೋಗಿರುವ ತೇಲುವ ಸೇತುವೆ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರಾಜ್ಯದ ಮೊದಲ ತೇಲುವ ಸೇತುವೆಯೆಂಬ ಹಿರಿಮೆ ಹೊಂದಿದ್ದ ಮಲ್ಪೆಯ ಫ್ಲೋಟಿಂಗ್ ಬ್ರಿಡ್ಜ್ ಶುಕ್ರವಾರ ಉದ್ಘಾಟನೆಗೊಂಡಿತ್ತು. ತೇಲುವೆ ಸೇತುವೆಗೆ ಸುಮಾರು 80ಲಕ್ಷ. ರೂ ವ್ಯಯಿಸಲಾಗಿತ್ತು. ಪ್ರವಾಸಿಗರಿಗೆ ವಿಶೇಷ ಅನುಭವ ನೀಡುವ ಈ ಸೇತುವೆಗೆ 15 ನಿಮಿಷದ ಮೋಜಿಗೆ 100 ರೂ. ಶುಲ್ಕ ಇರಿಸಲಾಗಿತ್ತು.
ಕರ್ನಾಟಕವನ್ನು ಹೊರತುಪಡಿಸಿದರೆ ಕೇರಳ ರಾಜ್ಯದ ಬೇಫೂರ್ ಬೀಚಿನಲ್ಲಿ ಈಗಾಗಲೇ ತೇಲುವ ಸೇತುವೆಯನ್ನು ಪ್ರವಾಸಿಗರ ಆಕರ್ಷಣೆ ಗೋಸ್ಕರ ನಿರ್ಮಿಸಲಾಗಿತ್ತು. ಸದ್ಯ ಸೇತುವೆಯ ದುರಸ್ಥಿ ಕಾರ್ಯವು ಕೂಡ ನಡೆಯುತ್ತಿದ್ದು ಶೀಘ್ರದಲ್ಲೆ ಪ್ರವಾಸಿಗರ ಬಳಕೆಗೆ ತೇಲುವ ಸೇತುವೆ ಲಭ್ಯವಾಗಲಿದೆ ಎನ್ನಲಾಗಿದೆ
ಸೇತುವೆ ಉದ್ಘಾಟನೆಯ ವೇಳೆ ಉಡುಪಿ ಶಾಸಕ ರಘುಪತಿ ಭಟ್ ಅಲೆಯ ರಭಸಕ್ಕೆ ಫ್ಲೋಟಿಂಗ್ ಬ್ರಿಡ್ಜ್ ಮೇಲೆಯೇ ಬಿದ್ದು ಸುದ್ದಿಯಾಗಿದ್ದರು.