Home ಟಾಪ್ ಸುದ್ದಿಗಳು ‘ಶಕ್ತಿ ಸ್ಮಾರ್ಟ್ ಕಾರ್ಡ್’ಗಳನ್ನು ನೀಡುವ ಪ್ರಕ್ರಿಯೆ ಶೀಘ್ರದಲ್ಲೇ ಪ್ರಾರಂಭ: ರಾಮಲಿಂಗಾ ರೆಡ್ಡಿ

‘ಶಕ್ತಿ ಸ್ಮಾರ್ಟ್ ಕಾರ್ಡ್’ಗಳನ್ನು ನೀಡುವ ಪ್ರಕ್ರಿಯೆ ಶೀಘ್ರದಲ್ಲೇ ಪ್ರಾರಂಭ: ರಾಮಲಿಂಗಾ ರೆಡ್ಡಿ

ಬೆಂಗಳೂರು: ‘ಶಕ್ತಿ ಕಾರ್ಡ್’ಗಳನ್ನು ನೀಡುವ ಪ್ರಕ್ರಿಯೆಯು ಶೀಘ್ರದಲ್ಲೇ ಪ್ರಾರಂಭವಾಗುತ್ತದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.


ಈ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ಜೊತೆಗೆ ಮಾತನಾಡಿದ ಅವರು, ‘ಇಷ್ಟು ದಿನ, ಸೇವಾ ಸಿಂಧು ಪೋರ್ಟಲ್ ಅಧಿಕಾರಿಗಳು ಗೃಹ ಜ್ಯೋತಿ ಮತ್ತು ಗೃಹ ಲಕ್ಷ್ಮಿ ಯೋಜನೆಗಳಿಗೆ ಅರ್ಜಿಗಳನ್ನು ಸ್ವೀಕರಿಸುವಲ್ಲಿ ನಿರತರಾಗಿದ್ದರು. ಶಕ್ತಿ ಯೋಜನೆಯಡಿ ಸುಮಾರು ಮೂರು ಕೋಟಿ ಫಲಾನುಭವಿಗಳಿದ್ದು, ಅವರಿಗೆ ಶಕ್ತಿ ಕಾರ್ಡ್ ವಿತರಿಸುವುದು ಸುಲಭದ ಮಾತಲ್ಲ. ಪೋರ್ಟಲ್ ಈಗ ಹೊರೆಯಿಂದ ಕೊಂಚ ಮುಕ್ತವಾಗಿರುವುದರಿಂದ, ನಾವು ಶಕ್ತಿ ಕಾರ್ಡ್ಗಳನ್ನು ನೀಡುವ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತೇವೆ’ ಎಂದರು.


ಮಹಿಳಾ ಫಲಾನುಭವಿಗಳು ತಮ್ಮ ಕಾಯಂ ವಾಸಸ್ಥಳದ ಮಾಹಿತಿ ಮತ್ತು ಅವರ ಫೋಟೊವನ್ನು ಇತರ ವಿವರಗಳೊಂದಿಗೆ ಸಲ್ಲಿಸಬೇಕು. ಬಳಿಕ ಶಕ್ತಿ ಕಾರ್ಡ್‌ಗಳನ್ನು ರಚಿಸಲಾಗುತ್ತದೆ. ಅವರು ಅದನ್ನು ಪ್ರತಿ ವರ್ಷ ನವೀಕರಿಸುವ ಅಗತ್ಯವಿಲ್ಲ. ಈ ಸಂಬಂಧ ರಾಜ್ಯ ಸರ್ಕಾರವು ಈ ವಾರ ವಿವರವಾದ ಮಾರ್ಗಸೂಚಿಯನ್ನು ಹೊರಡಿಸಲಿದೆ ಎಂದು ರೆಡ್ಡಿ ಹೇಳಿದರು.

Join Whatsapp
Exit mobile version