Home ಟಾಪ್ ಸುದ್ದಿಗಳು ಹಿಜಾಬ್ ಮತ್ತು ಪರೀಕ್ಷೆಯ ನಡುವೆ ಆಯ್ಕೆ ಮಾಡಿಕೊಳ್ಳುವಂತೆ ಪ್ರಾಂಶುಪಾಲರು ಒತ್ತಡ ಹೇರಿದ್ದಾರೆ: ಸಂತ್ರಸ್ತ ವಿದ್ಯಾರ್ಥಿಗಳ ಅಳಲು

ಹಿಜಾಬ್ ಮತ್ತು ಪರೀಕ್ಷೆಯ ನಡುವೆ ಆಯ್ಕೆ ಮಾಡಿಕೊಳ್ಳುವಂತೆ ಪ್ರಾಂಶುಪಾಲರು ಒತ್ತಡ ಹೇರಿದ್ದಾರೆ: ಸಂತ್ರಸ್ತ ವಿದ್ಯಾರ್ಥಿಗಳ ಅಳಲು

ತೀರ್ಥಹಳ್ಳಿ: ಹಿಜಾಬ್ ಧರಿಸಿದ ಕಾರಣಕ್ಕೆ ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಕೆಪಿಸಿ ಶಾಲೆಯ 10ನೇ ತರಗತಿಯ ಹದಿಮೂರು ಮುಸ್ಲಿಮ್ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನಿರಾಕರಿಸಿ ಮನೆಗೆ ಕಳುಹಿಸಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಸಂತ್ರಸ್ತ ವಿದ್ಯಾರ್ಥಿಗಳು, ಕೆಪಿಸಿ ಶಾಲೆಯ ಪ್ರಾಂಶುಪಾಲರು ಹಿಜಾಬ್ ಮತ್ತು ಪರೀಕ್ಷೆಯ ನಡುವೆ ಒಂದನ್ನು ಆಯ್ಕೆ ಮಾಡುವಂತೆ ನಮ್ಮ ಮೇಲೆ ಒತ್ತಡ ಹೇರಿದ್ದರು ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ರಾಜ್ಯಾದ್ಯಂತ ಶಿಕ್ಷಣ ಸಂಸ್ಥೆಗಳಲ್ಲಿ ಧಾರ್ಮಿಕ ಉಡುಪುಗಳನ್ನು ನಿಷೇಧಿಸಿ ಕರ್ನಾಟಕ ಹೈಕೋರ್ಟ್ ಮಧ್ಯಂತರ ಆದೇಶವನ್ನು ಜಾರಿಗೊಳಿಸಿದ ಬಳಿಕ ಕೆಪಿಸಿ ಶಾಲೆಯಿಂದ ಅಸಭ್ಯ ಆದೇಶ ಹೊರಬಿದ್ದಿದೆ. ಮುಸ್ಲಿಮ್ ವಿದ್ಯಾರ್ಥಿಗಳು ಹಿಜಾಬ್ ತೆಗೆಯದಿದ್ದರೆ ಶಾಲೆಯ ಆವರಣಕ್ಕೆ ಪ್ರವೇಶ ನಿರಾಕರಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಕೆಪಿಸಿ ಶಾಲೆಯ ಪ್ರಾಂಶುಪಾಲರು ನಮ್ಮ ಮುಂದೆ ಹಿಜಾಬ್ ಮತ್ತು ಪರೀಕ್ಷೆಯ ಆಯ್ಕೆಯನ್ನು ಮುಂದಿರಿಸಿದ್ದು, ಹಿಜಾಬ್ ತೆಗೆಯಲು ಸಾಧ್ಯವಿಲ್ಲ ಎಂದು ಪೋಷಕರು ಪ್ರಾಂಶುಪಾಲರಿಗೆ ಮನವರಿಕೆ ಮಾಡಿದ ಹೊರತಾಗಿಯೂ ಪರೀಕ್ಷೆ ಬರೆಯಲು ಅವಕಾಶ ನೀಡದೆ ಶಾಲೆಯಿಂದ ಹೊರ ಕಳುಹಿಸಲಾಗಿದೆ ಎಂದು ಸಂತ್ರಸ್ತ ವಿದ್ಯಾರ್ಥಿ ಮುಬಸ್ಸಿರಾ ಮಾಧ್ಯಮಕ್ಕೆ ತಿಳಿಸಿದ್ದಾಳೆ.

ಈ ಮಧ್ಯೆ ಕೊಡಗಿನ ನೆಲ್ಲಿ ಹುದಿಕೇರಿಯಲ್ಲಿರುವ ಸರ್ಕಾರಿ ಶಾಲೆಯಲ್ಲಿ ಸುಮಾರು 30 ವಿದ್ಯಾರ್ಥಿಗಳನ್ನು ಹಜಾಬ್ ಹಾಕಿದ ಕಾರಣಕ್ಕಾಗಿ ತರಗತಿ ಪ್ರವೇಶ ನಿರಾಕರಿಸಲಾಗಿತ್ತು. ಇದರಿಂದ ವಿದ್ಯಾರ್ಥಿಗಳು ಮನೆಗೆ ತೆರಳಿದ್ದಾರೆ.

Join Whatsapp
Exit mobile version