Home ಕರಾವಳಿ ಹಿಜಾಬ್ ಪರ ವಿದ್ಯಾರ್ಥಿಗಳ ವೈಯಕ್ತಿಕ ವಿವರದ ಬಿಜೆಪಿಯ ಟ್ವೀಟನ್ನು ಕಿತ್ತೆಸೆದ ಟ್ವಿಟ್ಟರ್ ಸಂಸ್ಥೆ!

ಹಿಜಾಬ್ ಪರ ವಿದ್ಯಾರ್ಥಿಗಳ ವೈಯಕ್ತಿಕ ವಿವರದ ಬಿಜೆಪಿಯ ಟ್ವೀಟನ್ನು ಕಿತ್ತೆಸೆದ ಟ್ವಿಟ್ಟರ್ ಸಂಸ್ಥೆ!

ನಿಯಮ ಉಲ್ಲಂಘನೆಯಾಗಿದೆಯೆಂದ ಟ್ವಿಟ್ಟರ್

ಉಡುಪಿ: ಕಾಂಗ್ರೆಸ್ ಪಕ್ಷವನ್ನು ಟೀಕಿಸುವ ಭರದಲ್ಲಿ ಹಿಜಾಬ್ ಪರ ಹೋರಾಡುತ್ತಿರುವ ಉಡುಪಿ ಮುಸ್ಲಿಮ್ ವಿದ್ಯಾರ್ಥಿಗಳ ವೈಯಕ್ತಿಕ ವಿವರಗಳನ್ನು ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿ ವಿಕೃತಿ ಮೆರೆದ ಬಿಜೆಪಿ ನಾಯಕರ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಬಿಜೆಪಿಯ ಟ್ವಿಟ್ಟರ್ ಪೋಸ್ಟನ್ನು ಸಂಸ್ಥೆಯು ಕಿತ್ತೆಸೆದಿದೆ.

ಟ್ವಿಟ್ಟರ್ ನಿಯಮಾವಳಿಯನ್ನು ಉಲ್ಲಂಘಿಸಿದ್ದಕ್ಕಾಗಿ ಈ ಕ್ರಮಕ್ಕೆ ಮುಂದಾಗಬೇಕಾಯಿತು ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.
ಟ್ವಿಟ್ಟರ್ ಸಂಸ್ಥೆಯ ಈ ನಡೆಯಿಂದ ಬಿಜೆಪಿ ತೀವ್ರ ಮುಖಭಂಗಕ್ಕೀಡಾಗಿದೆ.

ಉಡುಪಿಯ ವಿದ್ಯಾರ್ಥಿನಿಯರ ಕಾಲೇಜಿನ ದಾಖಲಾತಿಯ ವಿವರಗಳನ್ನು ಕಾಲೇಜು ಆಡಳಿತ ಮಂಡಳಿ ಸೋರಿಕೆ ಮಾಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ಬಗ್ಗೆ ಕಾಲೇಜು ಆಡಳಿತ ಮಂಡಳಿ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.

ಈ ಮಧ್ಯೆ ಮುಸ್ಲಿಮ್ ವಿದ್ಯಾರ್ಥಿಗಳ ವೈಯಕ್ತಿಕ ವಿವರುಗಳು ಬಿಜೆಪಿಯ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪ್ರತ್ಯಕ್ಷವಾಗಿದ್ದು, ಇದು ವಿವಾದವಾಗುತ್ತಿದ್ದಂತೆ ಟ್ವಿಟ್ಟರ್ ಸಂಸ್ಥೆ ಈ ಪೋಸ್ಟ್ ಅನ್ನು ಕಿತ್ತೆಸೆದಿದೆ.

Join Whatsapp
Exit mobile version