Home ಟಾಪ್ ಸುದ್ದಿಗಳು ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ: ಭಾರತಕ್ಕೆ ಪಲಾಯನ..?

ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ: ಭಾರತಕ್ಕೆ ಪಲಾಯನ..?

ಢಾಕಾ: ಹಿಂಸಾತ್ಮಕ ಪ್ರತಿಭಟನೆಗಳ ನಂತರ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡಿದ್ದಾರೆ ಎಂದು ಬಾಂಗ್ಲಾದೇಶ ಹೈಕಮಿಷನ್ ಅಧಿಕಾರಿಗಳು ದೆಹಲಿಯಲ್ಲಿ ಮಾಧ್ಯಮಗಳಿಗೆ ಖಚಿತಪಡಿಸಿದ್ದಾರೆ.


ಶೇಖ್ ಹಸೀನಾ ರಾಜೀನಾಮೆಯ ಬಳಿಕ ಇಂದು ಢಾಕಾದಿಂದ “ಸುರಕ್ಷಿತ ಸ್ಥಳ”ಕ್ಕೆ ಪಲಾಯನ ಮಾಡಿದ್ದಾರೆ. ರಾಯಿಟರ್ಸ್ ಪ್ರಕಾರ, ಅವರು ಇಂದು ಭಾರತಕ್ಕೆ ಬಂದಿಳಿದಿದ್ದಾರೆ. ಆಕೆ ಮತ್ತು ಆಕೆಯ ಸಹೋದರಿ ತನ್ನ ಅಧಿಕೃತ ನಿವಾಸವಾದ ಗೊನೊ ಭಾಬನ್ ನಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ.


ಬಾಂಗ್ಲಾದ ದಿನಪತ್ರಿಕೆಗಳ ವರದಿಗಳ ಪ್ರಕಾರ, ಅವರು ತನ್ನ ಸಹೋದರಿಯೊಂದಿಗೆ ದೇಶವನ್ನು ತೊರೆದಿದ್ದಾರೆ. ಈಗಾಗಲೇ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಭಾರತದ ಅಗರ್ತಲಾಕ್ಕೆ ಬಂದಿಳಿದಿದ್ದಾರೆ. ದೇಶದ ಸೇನಾ ಮುಖ್ಯಸ್ಥ ವಾಕರ್-ಉಜ್-ಜಮಾನ್ ಅವರು ಇಂದು ಸಂಜೆ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಡೈಲಿ ಸ್ಟಾರ್ ವರದಿ ಮಾಡಿದೆ.

Join Whatsapp
Exit mobile version