Home ಟಾಪ್ ಸುದ್ದಿಗಳು ಮಂಗಳೂರು: ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕಾ ದೋಣಿ ಬೆಂಕಿಗಾಹುತಿ

ಮಂಗಳೂರು: ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕಾ ದೋಣಿ ಬೆಂಕಿಗಾಹುತಿ

ಮಂಗಳೂರು: ಅರಬ್ಬಿ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದ ಸಫಾವಿ ಎಂಬ ಟ್ರಾಲ್ ಬೋಟ್ ಗೆ ಸೋಮವಾರ ನಸುಕಿನಲ್ಲಿ ಬೆಂಕಿ ಹೊತ್ತಿಕೊಂಡಿದೆ. ದೋಣಿಯಲ್ಲಿದ್ದ 10 ಮೀನುಗಾರರನ್ನು ಇನ್ನೊಂದು ದೋಣಿಯ ಮೀನುಗಾರರು ರಕ್ಷಿಸಿದ್ದಾರೆ.


ಮಂಗಳೂರು ಧಕ್ಕೆಯಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಹುಸೈನ್ ಎಂಬವರ ಮಾಲಕತ್ವದ ಬೋಟ್ ಬೆಂಕಿಗಾಹುತಿಯಾಗಿದೆ. ಇಂದು ಬೆಳಗ್ಗಿನ ಜಾವ ಸುಮಾರು 3 ರಿಂದ 4 ಗಂಟೆಯ ವೇಳೆಗೆ ಬೋಟ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ ಬೋಟ್ ನಲ್ಲಿದ್ದ ಮೀನುಗಾರರನ್ನು ಇನ್ನೊಂದು ಬೋಟ್ ನಲ್ಲಿದ್ದವರು ರಕ್ಷಿಸಿದ್ದು, ಅವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.

Join Whatsapp
Exit mobile version