ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಿದ್ದ, ಹಿಂದುತ್ವ ನಾಯಕರಿಂದ ಹಣಕಾಸು ಬೆಂಬಲ ಪೂರೈಸಲ್ಪಟ್ಟಿದ್ದ ಅಭ್ಯರ್ಥಿ ಪ್ರೆಸ್ಟನ್ ಕುಲಕರ್ಣಿ ಹೀನಾಯ ಸೋಲು ಕಂಡಿದ್ದಾರೆ. ಟೆಕ್ಸಾಸ್ ನ 22ನೇ ಸಂಸದೀಯ ಜಿಲ್ಲೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕುಲಕರ್ಣಿ ಶೇ. 44.5 ಮತಗಳನ್ನು ಪಡೆಯಲು ಮಾತ್ರ ಸಫಲರಾಗಿದ್ದಾರೆ.
ಕುಲಕರ್ಣಿ ಅವರ ವಿರುದ್ಧ ಸ್ಪರ್ಧಿಸಿದ್ದ ರಿಪಬ್ಲಿಕನ್ ಪಕ್ಷದ ಟ್ರಾಯ್ ನೆಹ್ಲ್ಸ್ ಶೇ. 51.7 ಮತಗಳನ್ನು ಪಡೆದು ವಿಜಯ ಪತಾಕೆ ಹಾರಿಸಿದ್ದಾರೆ.
ಕುಲಕರ್ಣಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಹಿಂದುತ್ವ ನಾಯಕರು ದೊಡ್ಡಮಟ್ಟದ ಹಣಕಾಸಿನ ನೆರವು ಒದಗಿಸಿದ್ದರು. ಚುನಾವಣೆಗೆ ಕೆಲವು ವಾರಗಳಿರುವಾಗ ಇತರ ಅಭ್ಯರ್ಥಿಗಳಿಗಿಂತ ದೊಡ್ಡ ಮೊತ್ತದ ದೇಣಿಗೆ ಸಂಗ್ರಹಿಸಿದ್ದರೂ, ಚುನಾವಣೆಯಲ್ಲಿ ಗೆಲ್ಲಲು ಕುಲಕರ್ಣಿಗೆ ಸಾಧ್ಯವಾಗಲಿಲ್ಲ.
ಕುಲಕರ್ಣಿ ಅವರನ್ನು ಸಂಸತ್ ಪ್ರವೇಶಿಸುವ ಮೂಲಕ, ತಮ್ಮ ಇಸ್ಲಾಮಾಫೋಬಿಕ್ ಚಿಂತನೆಗಳ ಆಧಾರದ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂಬ ಭರವಸೆಯಲ್ಲಿ ಹಿಂದುತ್ವ ಶಕ್ತಿಗಳಿದ್ದವು ಎನ್ನಲಾಗಿದೆ.
ಅಮೆರಿಕನ್ ಮುಸ್ಲಿಮರು, ಅದರಲ್ಲೂ ಭಾರತೀಯ ಮೂಲದವರು ಕುಲಕರ್ಣಿ ಸೋಲಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದಾರೆ. ಅವರಲ್ಲಿ ಹಲವಾರು ಮಂದಿ ಡೆಮಾಕ್ರಟಿಕ್ ಪರವಿದ್ದರೂ, ಕುಲಕರ್ಣಿ ಸ್ಪರ್ಧಿಸಿದ್ದ ಕ್ಷೇತ್ರದಲ್ಲಿ ಮಾತ್ರ ಪಕ್ಷದ ವಿರುದ್ಧ ಕಾರ್ಯಾಚರಿಸಿದ್ದರು ಎನ್ನಲಾಗಿದೆ.