Home ಟಾಪ್ ಸುದ್ದಿಗಳು ನವದೆಹಲಿ । ಅಪರಾಧ ಪ್ರಕ್ರಿಯೆ ಗುರುತಿಸುವಿಕೆ ಕಾಯ್ದೆಗೆ ರಾಷ್ಟ್ರಪತಿ ಸಹಿ

ನವದೆಹಲಿ । ಅಪರಾಧ ಪ್ರಕ್ರಿಯೆ ಗುರುತಿಸುವಿಕೆ ಕಾಯ್ದೆಗೆ ರಾಷ್ಟ್ರಪತಿ ಸಹಿ

ನವದೆಹಲಿ: ಅಪರಾಧ ಸಂದರ್ಭದಲ್ಲಿ ಆರೋಪಿಗಳ ಜೈವಿಕ ಮತ್ತು ದೈಹಿಕ ಮಾದರಿಗಳನ್ನು ಸಂಗ್ರಹಿಸಲು ಪೊಲೀಸರಿಗೆ ವಿಶೇಷ ಅಧಿಕಾರವನ್ನು ನೀಡುವ ಅಪರಾಧ ಪ್ರಕ್ರಿಯೆ ಗುರುತಿಸುವಿಕೆ ಕಾಯ್ದೆಗೆ ರಾಷ್ಟ್ರಪತಿ ಸಹಿ ಹಾಕಿದ್ದಾರೆ.

ಇದರೊಂದಿಗೆ ಕೈದಿಗಳ ಗುರುತಿಸುವಿಕೆ ಕಾಯ್ದೆ 1920 ಕ್ಕೆ ಪರ್ಯಾಯವಾಗಿ ಇದು ಜಾರಿಯಾಗುತ್ತಿದೆ. ಪ್ರಸಕ್ತ ಕಾಯ್ದೆಗೆ ಸಂಸತ್ತಿನ ಉಭಯ ಸದನದಲ್ಲಿ ಈ ತಿಂಗಳ ಆರಂಭದಲ್ಲಿ ಅನುಮೋದನೆ ಆಗಿದ್ದವು.

ಈ ಮಧ್ಯೆ ಲೆಕ್ಕ ಪರಿಶೋಧಕ, ಲೆಕ್ಕಾಧಿಕಾರಿ ಮತ್ತು ಕಂಪೆನಿ ಕಾರ್ಯದರ್ಶಿಗಳ ನಿರ್ವಹಣೆಗೆ ಸಂಬಂಧಿಸಿ ಕಾಯ್ದೆಯ ತಿದ್ದುಪಡಿಗೂ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅನುಮೋದನೆ ನೀಡಿದ್ದಾರೆ.

Join Whatsapp
Exit mobile version