Home ಟಾಪ್ ಸುದ್ದಿಗಳು ಮಂಗಳೂರು ಆಟೋ ಸ್ಫೋಟ ಪ್ರಕರಣಕ್ಕೂ ಪ್ರೇಮ್’ರಾಜ್’ಗೂ ಸಂಬಂಧವಿಲ್ಲ: ಡಿಜಿಪಿ ಸ್ಪಷ್ಟನೆ

ಮಂಗಳೂರು ಆಟೋ ಸ್ಫೋಟ ಪ್ರಕರಣಕ್ಕೂ ಪ್ರೇಮ್’ರಾಜ್’ಗೂ ಸಂಬಂಧವಿಲ್ಲ: ಡಿಜಿಪಿ ಸ್ಪಷ್ಟನೆ

ಬೆಂಗಳೂರು: ಮಂಗಳೂರಿನ ಹೊರ ವಲಯದ ಗರೋಡಿಯಲ್ಲಿ ನಡೆದ ಆಟೋ ಸ್ಫೋಟಕ್ಕೂ ಪ್ರೇಮ್’ರಾಜ್’ಗೂ ಯಾವುದೇ ಸಂಬಂಧವಿಲ್ಲವೆಂದು ಡಿಜಿಪಿ ಪ್ರವೀಣ್ ಸೂದ್ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಪ್ರೇಮ್’ರಾಜ್ ಎಂಬಾತ ಗುರುತಿನ ದಾಖಲೆ ಕಳ್ಳತನಕ್ಕೊಳಗಾದ ಸಂತ್ರಸ್ತ. ಇದು ದೃಢಪಟ್ಟಿದೆ. ಈ ಘಟನೆಗೂ ಪ್ರೇಮ್ ರಾಜ್ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ.

ಘಟನೆ ಸ್ಥಳದಲ್ಲಿ ಪ್ರೇಮ್’ರಾಜ್ ಹುಟಗಿ ಅವರ ಆಧಾರ್ ಕಾರ್ಡ್ ಪತ್ತೆಯಾಗಿದ್ದು, ಹುಬ್ಬಳ್ಳಿಯ ವಿಳಾಸ ತೋರಿಸುತ್ತಿದ್ದವು. ಈ ಹೆಸರಿನ ವ್ಯಕ್ತಿ ಮೈಸೂರಿನಲ್ಲಿ ಬಾಡಿಗೆ ಕೊಠಡಿ ಪಡೆದಿದ್ದ ಎಂಬ ಮಾಹಿತಿ ಲಭ್ಯವಾಗುತ್ತಿದ್ದು, ಆ ವಿಳಾಸವನ್ನು ಪರಿಶೀಲನೆ ನಡೆಸಿದಾಗ ಹಲವಾರು ಸ್ಫೋಟಕ ವಸ್ತುಗಳು ಸೇರಿದಂತೆ ಹಲವು ದಾಖಲೆಗಳನ್ನು ಪತ್ತೆಯಾಗಿದೆ. ಅವುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸ್ಫೋಟದ ವೇಳೆ ಗಾಯಗೊಂಡಿದ್ದ ಶಂಕಿತ ಪ್ರಯಾಣಿಕನ ಕುರಿತು ಮಾಹಿತಿಯನ್ನು ಪೊಲೀಸರು ಇನ್ನೂ ಬಹಿರಂಗಪಡಿಸಿಲ್ಲ.

Join Whatsapp
Exit mobile version