ಮೈಸೂರು: ಮಂಗಳೂರು ಆಟೋರಿಕ್ಷಾ ಸ್ಫೋಟ ಪ್ರಕರಣದ ಆರೋಪಿಯ ಮೈಸೂರಿನ ಬಾಡಿಗೆ ಮನೆಯ ಮೇಲೆ ಬಾಂಬ್ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೆ ಈ ಪ್ರದೇಶದಲ್ಲಿ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಹೇಳಲಾಗಿದೆ.
ಆರೋಪಿಗಳು ಕಳೆದ ತಿಂಗಳು ಬಾಡಿಗೆಗೆ ಒಂದು ಕೊಠಡಿವೊಂದನ್ನು ಪಡೆದುಕೊಂಡಿದ್ದು, ಮೊಬೈಲ್ ರಿಪೇರಿ ತರಬೇತಿಗಾಗಿ ನಗರಕ್ಕೆ ಬಂದಿರುವುದಾಗಿ ಮನೆಯ ಮಾಲಕರಿಗೆ ತಿಳಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆಯ ಕುರಿತು ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ ಡಿಜಿಪಿ ಪ್ರವೀಣ್ ಸೂದ್, ಮಂಗಳೂರಿನಲ್ಲಿ ನಡೆದ ಆಟೋರಿಕ್ಷ ಸ್ಫೋಟವು ಆಕಸ್ಮಿಕವಲ್ಲ. ಆದರೆ ಗಂಭೀರ ಹಾನಿ ಉಂಟು ಮಾಡುವ ಉದ್ದೇಶದಿಂದ ನಡೆದ ಉಗ್ರ ಕೃತ್ಯ ಎಂದು ತಿಳಿಸಿದ್ದರು.