ಆಪರೇಷ‌ನ್‌ ಗಂಗಾ ಮೂಲಕ ರಕ್ಷಿಸಲ್ಪಟ್ಟ ಗರ್ಭಿಣಿ; ಮಗುವಿಗೆ ‘ಗಂಗಾ’ ನಾಮಕರಣಕ್ಕೆ ನಿರ್ಧಾರ

Prasthutha|

ಹೊಸದಿಲ್ಲಿ: ಉಕ್ರೇನ್‌ನಿಂದ ಆಪರೇಷ‌ನ್‌ ಗಂಗಾ ಮೂಲಕ ಪೋಲೆಂಡ್‌ಗೆ ಸ್ಥಳಾಂತರಿಸಲ್ಪಟ್ಟ ಕೇರಳ ಮೂಲದ ದಂಪತಿಗಳು, ಸದ್ಯದಲ್ಲೇ ತಮಗೆ ಹುಟ್ಟಲಿರುವ ಮಗುವಿಗೆ “ಗಂಗಾ” ಎಂದು ನಾಮಕರಣ ನಿರ್ಧರಿಸಿದ್ದಾರೆ.

- Advertisement -

 ಕೇರಳದ ಅಭಿಜಿತ್‌ ಎಂಬವರು ಪತ್ನಿ ಸಹಿತ ಉಕ್ರೇನ್‌ ರಾಜಧಾನಿ ಕೀವ್‌ನಲ್ಲಿ ನೆಲೆಸಿದ್ದು, ಸಣ್ಣ ರೆಸ್ಟೋರೆಂಟ್‌ ನಡೆಸುತ್ತಿದ್ದಾರೆ. ಇದೀಗ ಅಭಿಜಿತ್ ಪತ್ನಿ ತುಂಬು ಗರ್ಭಿಣಿಯಾಗಿದ್ದು, ದಂಪತಿಯನ್ನು ಆಪರೇಷ‌ನ್‌ ಗಂಗಾ ಮೂಲಕ ಪೋಲೆಂಡ್‌ಗೆ ಸ್ಥಳಾಂತರಿಸಲಾಗಿದೆ.

ಆಸ್ಪತ್ರೆಗೆ ದಾಖಲಿಸಲಾಗಿರುವ ಆಕೆಯ ಆರೋಗ್ಯ ಉತ್ತಮವಾಗಿದ್ದು ಮಾರ್ಚ್‌ 26ರಂದು ಹೆರಿಗೆಯಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ. ಮಗು ಯಾವುದೇ ಆಗಿದ್ದರೂ ನಾನು ಗಂಗಾ ಎಂದೇ ಹೆಸರಿಡುತ್ತೇನೆ ಎಂದು ಅಭಿಜಿತ್‌ ತಿಳಿಸಿದ್ದಾರೆ.

Join Whatsapp
Exit mobile version