Home ಟಾಪ್ ಸುದ್ದಿಗಳು ಲವ್ ಜಿಹಾದ್ ‘ರಿಯಾಲಿಟಿ ಚೆಕ್’: NDTV ತನಿಖಾ ವರದಿಗೆ ಅಂತಾರಾಷ್ಟ್ರೀಯ ಪ್ರಶಸ್ತಿ

ಲವ್ ಜಿಹಾದ್ ‘ರಿಯಾಲಿಟಿ ಚೆಕ್’: NDTV ತನಿಖಾ ವರದಿಗೆ ಅಂತಾರಾಷ್ಟ್ರೀಯ ಪ್ರಶಸ್ತಿ

ನವದೆಹಲಿ: ಮುಸ್ಲಿಂ ಯುವಕರು ಹಿಂದೂ ಯುವತಿಯರನ್ನು ಪ್ರೀತಿಯ ಬಲೆಗೆ ಬೀಳಿಸಿ ಆ ಬಳಿಕ ಮತಾಂತರ ಮಾಡಿ ಬಳಿಕ ಅವರನ್ನು ವಿವಿಧ ಭಯೋತ್ಪಾದಕ ಚಟುವಟಿಕೆಗಳಿಗೆ ಬಳಸಲು ‘ಲವ್ ಜಿಹಾದ್’ ಮಾಡುತ್ತಿದ್ದಾರೆ ಎಂಬ ಆರೋಪದ ಬಗ್ಗೆ ದೇಶದ ಖ್ಯಾತ ಸುದ್ದಿ ಸಂಸ್ಥೆ NDTV ನಡೆಸಿದ ‘ಲವ್ ಜಿಹಾದ್-ರಿಯಾಲಿಟಿ ಚೆಕ್’ ವಿಶೇಷ ತನಿಖಾ ವರದಿಗೆ ಅಮೇರಿಕಾ ಮೂಲದ ಇಂಟರ್‌ನ್ಯಾಶನಲ್ ಪ್ರೆಸ್ ಇನ್‌ಸ್ಟಿಟ್ಯೂಟ್ ಪ್ರಶಸ್ತಿ ಲಭಿಸಿದೆ.


NDTVಯ ಶ್ರೀನಿವಾಸನ್ ಜೈನ್ ಮತ್ತು ಮರಿಯಮ್ ಅಲವಿ ಅವರು ಇಂಟರ್‌ನ್ಯಾಶನಲ್ ಪ್ರೆಸ್ ಇನ್‌ಸ್ಟಿಟ್ಯೂಟ್ (ಐಪಿಐ) ಇಂಡಿಯಾ ಚಾಪ್ಟರ್ ಎಕ್ಸಲೆನ್ಸ್ ಇನ್ ಜರ್ನಲಿಸಂ ಅವಾರ್ಡ್- 2021 ಅನ್ನು ಸ್ವೀಕರಿಸಿದ್ದಾರೆ.
ಮುಸ್ಲಿಂ ಯುವಕರು ಹಿಂದೂ ಯುವತಿಯರನ್ನು ಮೋಸದ ಬಲೆಯಲ್ಲಿ ಸಿಲುಕಿಸುತ್ತಿದ್ದಾರೆ ಎಂದು ಆರೋಪಿಸುತ್ತಲೇ ಬಂದಿದ್ದ ಉತ್ತರ ಪ್ರದೇಶದ ಸರ್ಕಾರದ ವಾದವನ್ನು ದಾಖಲೆ ಸಮೇತ ಸುಳ್ಳುಗಳ ಸರಮಾಲೆ ಎಂದು NDTV ಸಾಬೀತುಪಡಿಸಿತ್ತು.
2020 ರ ನವೆಂಬರ್ 6 ರಂದು NDTVಯಲ್ಲಿ ಪ್ರಸಾರಗೊಂಡಿದ್ದ ಲವ್ ಜಿಹಾದ್- ರಿಯಾಲಿಟಿ ಚೆಕ್’ ವಿಶೇಷ ತನಿಖಾ ವರದಿಯಲ್ಲಿ, ‘ಲವ್ ಜಿಹಾದ್’ ಎಂಬುದು ಕೇವಲ ತಂತ್ರ. ರಾಜಕೀಯ ಉದ್ದೇಶಕ್ಕೆ ಉತ್ತರ ಪ್ರದೇಶ ಸರಕಾರ ಮತ್ತು ಹಿಂದುತ್ವವಾದಿ ಗುಂಪು ಬಳಸುತ್ತಿದೆ. ಈ ಬಗ್ಗೆ ಸರಿಯಾದ ಯಾವುದೇ ಅಂಕಿ ಅಂಶ ಸರಕಾರದ ಬಳಿಯೇ ಇಲ್ಲ. ಇದು ಯೋಗಿ ಸರಕಾರದ ಬೋಗಸ್ . ದಾಖಲಾದ ಅರ್ಧಕ್ಕರ್ಧ ಪ್ರಕರಣಗಳು ಬಿದ್ದು ಹೋಗಿವೆ ಎಂದು ವರದಿ ಬಿತ್ತರಿಸಿತ್ತು.

Join Whatsapp
Exit mobile version