ವಿದ್ಯಾನಗರ: ನಾಳೆ (ನವೆಂಬರ್ 13 ಆದಿತ್ಯವಾರ) SJM ಮೋಂಟುಗೋಳಿ ರೇಂಜ್ ವತಿಯಿಂದ ರೇಂಜ್ ಮಟ್ಟದ ಪ್ರತಿಭಾ ಸಂಗಮ ಬದ್ರಿಯಾನಗರದ ಜುಮಾ ಮಸ್ಜಿದ್ ವಠಾರದಲ್ಲಿ ನಡೆಯಲಿದೆ.
ಈ ಕುರಿತು ಮಾಹಿತಿ ನೀಡಿದ ಪ್ರತಿಭಾ ಸಂಗಮ ಪ್ರೋಗ್ರಾಮ್ ಸಮಿತಿಯ ಕನ್ವೀನರ್ ಅಶ್ರಫ್ ಸಖಾಫಿ ಉರ್ಣಿ, ತಾಜುಲ್ ಫುಖಹಾಅ್ ಮರ್ಹೂಂ ಬೇಕಲ್ ಉಸ್ತಾದರ(ನ. ಮ) ಮಖ್ಬರ ಝಿಯಾರತಿನೊಂದಿಗೆ ಕಾರ್ಯಕ್ರಮ ಪ್ರಾರಂಭಗೊಳ್ಳಲಿದೆ ಎಂದು ತಿಳಿಸಿದರು.
ಜುಮಾ ಮಸ್ಜಿದ್ ಬದ್ರಿಯಾ ನಗರ ಇದರ ಅಧ್ಯಕ್ಷರಾದ ಹಸನ್ ಮುಸ್ಲಿಯಾರ್ ಅವರು ಧ್ವಜಾರೋಹಣಗೈಯಲಿದ್ದು, ಪ್ರತಿಭಾ ಸಂಗಮ ಪ್ರೋಗ್ರಾಮ್ ಸಮಿತಿಯ ಚಯರ್ಮ್ಯಾನ್ ಉಸ್ಮಾನ್ ಸಅದಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮಿಷನರಿ ವಿಭಾಗ SJM ಮೋಂಟುಗೋಳಿ ಇದರ ಉಪಾಧ್ಯಕ್ಷರಾದ ಅಬೂಬಕ್ಕರ್ ಸಅದಿ ಮೋಂಟುಗೋಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, SJM ಮೋಂಟುಗೋಳಿ ಕಾರ್ಯದರ್ಶಿ ಇಕ್ಬಾಲ್ ಮರ್ಝೂಖಿ ಸಖಾಫಿ ಸ್ವಾಗತ ಭಾಷಣಗೈಯ್ಯಲಿದ್ದಾರೆ.
ನಂತರ ವಿವಿಧ ಮದ್ರಸ ವಿದ್ಯಾರ್ಥಿಗಳಿಂದ ಪ್ರತಿಭಾ ಸಂಗಮ ನಡೆಯಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂಜೆ 5ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭವನ್ನು SJM ಕರ್ನಾಟಕ ರಾಜ್ಯ ಉಪಾಧ್ಯಕ್ಷರಾದ ಮುಹ್ಯದ್ದೀನ್ ಸಅದಿ ತೋಟಾಲ್ ಉದ್ಘಾಟಿಸಲಿದ್ದಾರೆ. SJM ಮೋಂಟುಗೋಳಿ ಇದರ ಅಧ್ಯಕ್ಷರಾದ ಸಿದ್ದೀಕ್ ಸಅದಿ ಮೊಂಟೆಪದವು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರತಿಭಾ ಸಂಗಮ ಪ್ರೋಗ್ರಾಮ್ ಸಮಿತಿಯ ಕನ್ವೀನರ್ ಅಶ್ರಫ್ ಸಖಾಫಿ ಉರ್ಣಿ ಸ್ವಾಗತ ಭಾಷಣಗೈಯ್ಯಲಿದ್ದಾರೆ.
ಅಬ್ದುಲ್ ಖಾದಿರ್ ಸಖಾಫಿ ( ಮ್ಯಾನೇಜರ್ ಆಲ್ ಮದೀನ ಇಸ್ಲಾಮಿಕ್ ಕಾಂಪ್ಲೆಕ್ಸ್ ), ಉಸ್ಮಾನ್ ಸಅದಿ ಪಟ್ಟೋರಿ, ಅಬ್ದುಲ್ ಹಮೀದ್ ಮದನಿ ( ಮುಫತ್ತಿಶ್ IEB) ಕಾರ್ಯಕ್ರಮಕ್ಕೆ ಶುಭ ಹಾರೈಸಲಿದ್ದಾರೆ.
ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಅಬೂಬಕರ್ ಮದನಿ ತೋಟಾಲ್ (ಅಧ್ಯಕ್ಷರು ಎಸ್.ವೈ.ಎಸ್ ಮೋಂಟುಗೋಳಿ ಸೆಂಟರ್), ಅಬೂಬಕರ್ ಮದನಿ ಪಡಿಕ್ಕಲ್ (ಪ್ರ.ಕಾರ್ಯದರ್ಶಿ ಎಸ್.ಎಂ.ಎ ಮೋಂಟುಗೋಳಿ ರೀಜನಲ್), ಕೆ.ಪಿ. ಅಬೂಬಕರ್ (ಅಧ್ಯಕ್ಷರು ಎಸ್‌ಎಂಎ ಮುಡಿಪು ಝೋನಲ್), ಆಲಿಕುಞಿ (ಅಧ್ಯಕ್ಷರು ಎಸ್‌ಎಂಎ ಮೋಂಟುಗೋಳಿ ರೀಜನಲ್), ಮೂಸಾ ಹಾಜಿ (ಅಧ್ಯಕ್ಷರು ಜುಮಾ ಮಸ್ಜಿದ್ ತೋಟಾಲ್), ಅಬ್ಬಾಸ್ ಕೊಡಂಚ್ಚಿಲ್ (ಅಧ್ಯಕ್ಷರು ಜುಮಾ ಮಸ್ಜಿದ್ ಮರಿಕ್ಕಳ), ಖಾದರ್ ಕೆ. (ಅಧ್ಯಕ್ಷರು ಜುಮಾ ಮಸ್ಜಿದ್ ಮೊಂಟೆಪದವು), ಸುಲೈಮಾನ್ (ಅಧ್ಯಕ್ಷರು ಜುಮಾ ಮಸ್ಜಿದ್ ಮೋಂಟುಗೋಳಿ), ಇಬ್ರಾಹೀಂ ಬಾವಾ ಹಾಜಿ(ಅಧ್ಯಕ್ಷರು ಜುಮಾ ಮಸ್ಜಿದ್ ಪಡಿಕ್ಕಲ್), ಸಲೀಂ ( ಅಧ್ಯಕ್ಷರು ಜುಮಾ ಮಸ್ಜಿದ್ ಪೊಟ್ಟೋಳಿಕೆ), ಯೂಸುಫ್ (ಅಧ್ಯಕ್ಷರು ಜುಮಾ ಮಸ್ಟಿದ್ ಹಯಾತ್ ನಗರ), ಅಬ್ಬು ಹಾಜಿ ( ಅಧ್ಯಕ್ಷರು ತಾಜುಲ್ ಉಲಮಾ ಟ್ರಸ್ಟ್ ಕಲ್ಲರ್ಬೆ), ಯು.ಎಂ ಅಬ್ದುಲ್ ಅಝೀಝ್ (ಅಂಬರ್ ವ್ಯಾಲಿ ಆಂಗ್ಲ ಮಾಧ್ಯಮ ಶಾಲೆ ವಿದ್ಯಾನಗರ), ಅಬ್ದುಲ್ ಜಲೀಲ್ ಮೋಂಟುಗೋಳಿ (ಪ್ರ.ಕಾರ್ಯದರ್ಶಿ ಕರ್ನಾಟಕ ಮುಸ್ಲಿಂ ಜಮಾಅತ್ ಉಳ್ಳಾಲ ತಾಲೂಕು), ಇಸ್ಮಾಯಿಲ್ (ಚೇರ್‌ಮ್ಯಾನ್ ಸ್ವಾಗತ ಸಮಿತಿ), ಅಝರ್ ಮರಿಕ್ಕಳ (ಅಧ್ಯಕ್ಷರು ಎಸ್.ಎಸ್.ಎಫ್ ಮೋಂಟುಗೋಳಿ ಸೆಕ್ಟರ್) ಸಿದ್ದೀಖ್ (ಪ್ರ.ಕಾರ್ಯದರ್ಶಿ ಜುಮಾ ಮಸ್ಜಿದ್ ಬದ್ರಿಯಾ ನಗರ), ಅಬ್ದುಲ್ಲಾ (ಅಧ್ಯಕ್ಷರು ಎಸ್.ವೈ.ಎಸ್ ಬದ್ರಿಯಾನಗರ), ಇಸ್ಮಾಯಿಲ್ ಜಿಐ (ಅಧ್ಯಕ್ಷರು ಬದ್ರ್ ಯಂಗ್ ಮೆನ್ಸ್ ಬದ್ರಿಯಾ ನಗರ), ಸಬೀರ್ (ಅಧ್ಯಕ್ಷರು ಎಸ್.ಎಸ್.ಎಫ್ ಬದ್ರಿಯಾ ನಗರ) ಭಾಗವಹಿಸಲಿದ್ದಾರೆ.